ಕಾರ್ಕಳ, ಮೇ 20: ರಾಷ್ಟ್ರಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆ.ಇ.ಇ.ಮೈನ್ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ವಿದ್ಯಾರ್ಥಿಗಳಾದ ಬಿಪಿನ್ ಜೈನ್.ಬಿ.ಎಂ. 99.9754815 ಪರ್ಸಂಟೈಲ್ (ಗಣಿತಶಾಸ್ತ್ರ 100 ಪರ್ಸಂಟೈಲ್, ಆಲ್ ಇಂಡಿಯಾ ರ‍್ಯಾಂಕ್ 22), ಕೇದಾರ್ ರಮೇಶ್ ಕುಲಕರ್ಣಿ 99.9670351 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 32), ಪ್ರಣವ್ ಕುಮಾರ್ ಭಂಡಿ 99.9069226 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 75), ಚೈತನ್ಯ ಚಲಿತ್ 99.7905759 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 169), ಸುಜಲ್ ಸಚಿನ್ ಯಾಡವಿ 99.7875065 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 176), ಚಿರಂತನ ಜೆ.ಎ. 99.7498546 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 209), ಪ್ರಿಯಾಂಶ್ ಎಸ್.ಯು. 99.705255 ಪರ್ಸಂಟೈಲ್ (ಗಣಿತ ಶಾಸ್ತ್ರ 100 ಪರ್ಸಂಟೈಲ್, ಆಲ್ ಇಂಡಿಯಾ ರ‍್ಯಾಂಕ್ 245), ಅನುರಾಗ್ 99.3815893 ಪರ್ಸಂಟೈಲ್ (ಆಲ್ ಇಂಡಿಯಾ ರ‍್ಯಾಂಕ್ 492), ಹಾಗೂ ಕನ್ನಿಕಾ ದೀಪಕ್ ಶೆಟ್ಟಿ 99.3699886 ಪರ್ಸಂಟೈಲ್(ಆಲ್ ಇಂಡಿಯಾ ರ‍್ಯಾಂಕ್ 515), ಗಳಿಸಿದ್ದಾರೆ. ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಮೊದಲ ಹಂತದ ಪರೀಕ್ಷೆಯಲ್ಲಿ ಕೇದಾರ್ ರಮೇಶ್ ಕುಲಕರ್ಣಿ 99.9670351 ಪರ್ಸಂಟೈಲ್‌ನೊಂದಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದು ಹಾಗೂ ಈಗಾಗಲೇ ಪ್ರಕಟಗೊಂಡ ಜೆ.ಇ.ಇ. ಮೈನ್ ಬಿ.ಟೆಕ್ -2024 ಅಂತಿಮ ಫಲಿತಾಂಶದಲ್ಲೂ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.