ಕೋಟ, ಮೇ 18: ಇಲ್ಲಿನ ಸಾಸ್ತಾನದ ಸಮೀಪ ಪಾಂಡೇಶ್ವರ ಗ್ರಾ.ಪಂ ವ್ಯಾಪ್ತಿಯ ಮೂಡಹಡು ಕಳಿಬೈಲು ಕೊರಗಜ್ಜ ಸಾನಿಧ್ಯದಲ್ಲಿ ಕಳೆದ ವಾರ ನೇಮೋತ್ಸವ ವಾರ್ಷಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ಮರುದಿನದ ಪವಾಡ ನಡೆದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೊಕ್ಕರ್ಣೆ ಕಾಡೂರು ನಿವಾಸಿ ಬೇಬಿ ಹಾಗೂ ಲಕ್ಷ್ಮಿ ಎಂಬವರು ತನ್ನ 16 ಗ್ರಾಂ ಚಿನ್ನದ ಕರಿಮಣಿ ಕಳೆದು ಹೋಗಿದ್ದು ಅವರು ಶ್ರೀ ಕ್ಷೇತ್ರವನ್ನು ಸಂದರ್ಶಿಸಿದರು. ಅದರಂತೆ ಅಲ್ಲಿನ ಪಧಾನ ಅರ್ಚಕ ಅಭಿಜಿತ್ ಪಾಂಡೇಶ್ವರರ ಅಣತಿಯ ನುಡಿಯಂತೆ ಮನೆಯ ವಾಶ್ ರೂಮ್ ನಲ್ಲಿ ಬಿದ್ದಿರುವ ಸಂದೇಶ ನೀಡಿದ್ದು ಅದರಂತೆ ಅದೇ ಟಾಯ್ಲೆಟ್‌ನಲ್ಲೆ 16 ಗ್ರಾಂ ಕರಿಮಣಿ ಸರ ಸಿಕ್ಕಿರುವುದು ಅದನ್ನು ಗುರುವಾರ ಶ್ರೀ ಕ್ಷೇತ್ರ ಕಳಿಬೈಲು ಸಾನಿಧ್ಯದಲ್ಲಿ ಕೊರಗಜ್ಜಗೆ ಪೂಜೆ ಸಲ್ಲಿಸಿ ಕೊಂಡೊಯ್ದರು. ಇದೇ ಕುಟುಂಬಕ್ಕೆ ಸೇರಿದ ಚಿನ್ನದ ಬಳೆಯೊಂದು ಬೆಂಗಳೂರಿನ ಪರಿಸರವೊಂದರಲ್ಲಿ ಕಳೆದುಹೋಗಿತ್ತು. ಆ ಸಂದರ್ಭದಲ್ಲಿ ಅಜ್ಜನಿಗೆ ಅತಿ ಪ್ರಿಯವಾದ ಅಗಲು ಸೇವೆ ನೀಡುವ ಹರಕೆ ಹೊತ್ತ ಮರುಗಳಿಗೆಯಲ್ಲೆ ಅಲ್ಲಿನ ಬೇಕರಿಯೊಂದರ ಎದುರು ಸಿಕ್ಕಿರುವುದು ತಿಳಿದಿದೆ. ಕಲಿಯುಗದಲ್ಲಿ ಕೊರಗಜ್ಜನ ಪವಾಡ ವಸ್ತುಸ್ಥಿತಿ ಅನಾವರಣಗೊಳ್ಳುತ್ತಿರುವುದಂತು ಸತ್ಯವಾಗಿದೆ. ಈ ಕ್ಷೇತರದಲ್ಲಿ ಸಾಕಷ್ಟು ಪವಾಡಗಳು ನಡೆಯುತ್ತಿದ್ದು ಇಲ್ಲಿನ ಕೊರಗಜ್ಜ, ತುಳಸಿ ಅಮ್ಮ, ಮಾರಿಕಾಂಬೆ ಸೇರಿದಂತೆ ವಿವಿಧ ದೈವ ದೇವರುಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯನ್ನು ಕಾಣುತ್ತಿದೆ ಎಂದು ಅಭಿಜಿತ್ ಪಾಂಡೇಶ್ವರ ಹೇಳಿದ್ದಾರೆ.
ಪಾಂಡೇಶ್ವರ ಕಳಿಬೈಲ್ ಕೊರಗಜ್ಜ ಸಾನಿಧ್ಯದಲ್ಲಿ ನಡೆಯಿತು ಪವಾಡ
ಪಾಂಡೇಶ್ವರ ಕಳಿಬೈಲ್ ಕೊರಗಜ್ಜ ಸಾನಿಧ್ಯದಲ್ಲಿ ನಡೆಯಿತು ಪವಾಡ
Date: