Monday, February 24, 2025
Monday, February 24, 2025

ಉಡುಪಿಯ ಬಾಲಕೃಷ್ಣನ ಮುಂದೆ ಪುಟ್ಟ ಕಲಾವಿದೆಯ ಕಲಾಸಿರಿ ಅನಾವರಣ

ಉಡುಪಿಯ ಬಾಲಕೃಷ್ಣನ ಮುಂದೆ ಪುಟ್ಟ ಕಲಾವಿದೆಯ ಕಲಾಸಿರಿ ಅನಾವರಣ

Date:

ಉಡುಪಿ, ಮೇ 17: ಪುಟಾಣಿ ಕಲಾವಿದೆ ಹತ್ತು ವರ್ಷದ ಗಂಗಾ ಶಶಿಧರ್ ವಯಲಿನ್ ವಾದನ ಕಛೇರಿ ಕಾರ್ಯಕ್ರಮ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನಸಂದಣಿಯ ನಡುವೆ ನಡೆಯಿತು.

ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬಾಲ ಕಲಾವಿದೆಯನ್ನು ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಹರಸಿದರು. ಗುರುಗಳಾದ ವಿದ್ವಾನ್ ಅನುರೂಪ್ ಇತರ ಸಹಕಲಾವಿದರನ್ನೂ ಪ್ರಸಾದ ನೀಡಿ ಹರಸಿದರು. ಕಿಕ್ಕಿರಿದ ರಾಜಾಂಗಣದಲ್ಲಿ ನಡೆದ ಈ ಸಂಗೀತ ಗಾನಸುಧೆಯನ್ನು ಉಡುಪಿಯ ಹೆಸರಾಂತ ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಹರಿಶ್ಚಂದ್ರ ತಮ್ಮ ಆಸ್ಪತ್ರೆಯ 30 ನೇ ವರ್ಧಂತ್ಯುತ್ಸವದ ನಿಮಿತ್ತ ಪ್ರಾಯೋಜಿಸಿದ್ದರು. ಶ್ರೀ ಮಠದ ವಿಶೇಷ ಭಕ್ತರಾದ ಹರಿಶ್ಚಂದ್ರ ದಂಪತಿಗಳನ್ನು ಪರ್ಯಾಯ ಶ್ರೀಪಾದರು ಶ್ರೀ ಕೃಷ್ಣ ಪ್ರಸಾದವನ್ನು ನೀಡಿ ಹರಸಿದರು. ಗಂಗಾ ಅವರಿಗೆ ಭಗವದ್ಗೀತೆಯನ್ನು ಬರೆಯುವ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ಶ್ರೀಪಾದರು ನೀಡಿ ಉಜ್ವಲ ಭವಿಷ್ಯವನ್ನು ಹಾರೈಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!