ಉಡುಪಿ, ಮೇ 14: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಆಶ್ರಯದಲ್ಲಿ ಮಂಗಳೂರು ವಿಶ್ವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾಕೂಟ ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ಸಾಫಲ್ಯ ಟ್ರಸ್ಟ್ನ ಅಧ್ಯಕ್ಷರಾದ ನಿರೂಪಮಾ ಪ್ರಸಾದ್ ಶೆಟ್ಟಿ ಉದ್ಘಾಟಿಸಿದರು. ಕಳೆದ ಹಲವಾರು ವರ್ಷಗಳಿಂದ ಕ್ರೀಡೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳೊಂದಿಗೆ ಮುಂದೆ ಸಾಗುತ್ತಿರುವುದು ಶ್ಲಾಘನೀಯ. ರಾಜ್ಯ ಮತ್ತು ವಿ.ವಿ. ಮಟ್ಟದ ಕ್ರೀಡಾ ಕೂಟಗಳ ಮೂಲಕ ಗಮನ ಸೆಳೆದಿರುವ ಕಾಲೇಜು ಇದೀಗ ಪವರ್‌ಲಿಂಪ್ಟಿಂಗ್ ಪಂದ್ಯಾಕೂಟ
ಆಯೋಜಿಸುತ್ತಿರುವ ಹಿನ್ನಲೆಯಲ್ಲಿ ಭಾಗವಹಿಸುತ್ತಿರುವ ಸ್ಪಾರ್ಧಾಳುಗಳಿಗೆಲ್ಲಾ ಉತ್ತಮ ಕ್ರೀಡಾ ಸ್ಪೂರ್ತಿಯೊಂದಿಗೆ ಯಶಸ್ಸನ್ನು ಗಳಿಸುವಂತಾಗಲಿ ಎಂದರು. ಮುಖ್ಯ ಅತಿಥಿ ಲಯನ್ಸ್ ಅಮೃತ್ ಉಡುಪಿ ಇದರ ಅಧ್ಯಕ್ಷರಾದ ಭಾರತಿ ಹರೀಶ್ ಪಂದ್ಯಾಕೂಟಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಟ್ ಸಂತೋಷ್ ಪಿಂಟೋ, ಒಂದೇ ವರ್ಷದಲ್ಲಿ ಪವರ್‌ಲಿಪ್ಟಿಂಗನ್ನು ಒಳಗೊಂಡು ನಾಲ್ಕು ವಿ.ವಿ. ಮಟ್ಟದ ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ತೆಂಕನಿಡಿಯೂರು ಕಾಲೇಜಿಗೆ ಅಭಿನಂದನೆಗಳನ್ನು ಸಮರ್ಪಿಸಿ ಪಂದ್ಯಾಕೂಟಕ್ಕೆ ಶುಭ ಕೋರಿದರು.
ಕಾಲೇಜಿನ ಪ್ರಾಂಶುಪಾಲರದ ಪ್ರೊ. ಸುರೇಶ್ ರೈ ಕೆ. ಸ್ವಾಗತಿಸಿ ಪಂದ್ಯಾಕೂಟದ ಔಚಿತ್ಯವನ್ನು ತಿಳಿಸಿದರು. ಪಂದ್ಯಾಕೂಟದ ಆಯೋಜಕರಾದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಹರಿದಾಸ್ ಕೂಳೂರು, ಅಂತರ್ ರಾಷ್ಟ್ರೀಯ ತೀರ್ಪುಗಾರರಾದ ಪ್ರೇಮನಾಥ ಉಳ್ಳಾಲ್, ಜಗದೀಶ್, ಕಾಲೇಜಿನ ಬೋಧಕ, ಬೋಧಕೇತರ ವೃಂದವರು ಉಪಸ್ಥಿತರಿದ್ದರು.