ಕೋಟ, ಮೇ 4: ರಜಾರಂಗು ಶಿಬಿರವನ್ನು ಕಳೆದ ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ. ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತ, ತಿಂಗಳಪೂರ್ತಿ ಶಿಬಿರವನ್ನು ನಿರ್ವಹಿಸುವುದು ಕಷ್ಟ ಸಾಧ್ಯ. ಆದರೆ ಈ ಸಂಸ್ಥೆಯ ಸದಸ್ಯರು ತನ್ನೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ಮಕ್ಕಳ ಏಳಿಗೆಯನ್ನು ಬಯಸುತ್ತಾ, ಮಕ್ಕಳ ಪ್ರತಿಭೆಗಳನ್ನು ಹುರಿದುಂಬಿಸುತ್ತಾ ಬಹಳ ಎತ್ತರಕ್ಕೆ ಏರಿರುವುದು ಸಾಧನೆಯೇ ಸರಿ ಎಂದು ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು ಅಭಿಪ್ರಾಯಪಟ್ಟರು. ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ‘ರಜಾರಂಗು-24’ 23ನೇ ದಿನದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ದೇಶಿಸಿ ಅವರು ಮಾತನಡಿದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ಐಶಾನಿ ಮೈಸೂರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಶಿಬಿರ ‘ರಜಾರಂಗು’: ಸುರೇಶ್ ಗಿಳಿಯಾರು
ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಶಿಬಿರ ‘ರಜಾರಂಗು’: ಸುರೇಶ್ ಗಿಳಿಯಾರು
Date: