Tuesday, November 26, 2024
Tuesday, November 26, 2024

ಡಾ‌. ಉಮೇಶ್ ಪ್ರಭು ಅವರಿಗೆ ‘ಬಾಲ‌ ವಾತ್ಸಲ್ಯ ಸಿಂಧು’ ಪ್ರಶಸ್ತಿ

ಡಾ‌. ಉಮೇಶ್ ಪ್ರಭು ಅವರಿಗೆ ‘ಬಾಲ‌ ವಾತ್ಸಲ್ಯ ಸಿಂಧು’ ಪ್ರಶಸ್ತಿ

Date:

ಉಡುಪಿ, ಮೇ 1: ದೇವರ ಮೇಲೆ ವಿಶ್ವಾಸವನ್ನಿಟ್ಟು ಸೇವೆ ಮಾಡಿದರೆ ನಮ್ಮ ಕೆಲಸಗಳು ಯಶಸ್ವಿಯಾಗುವಲ್ಲಿ ಸಂಶಯವಿಲ್ಲ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀಕೃಷ್ಣ ಬಾಲನಿಕೇತನ, ವಿಶ್ವೇಶತೀರ್ಥ ಸೇವಾಧಾಮ, ಶ್ರೀ ಕೃಷ್ಣ ಸೇವಾಧಾಮ‌ ಟ್ರಸ್ಟ್ ವತಿಯಿಂದ ಕೊಡಮಾಡುವ ಬಾಲ ವಾತ್ಸಲ್ಯ ಸಿಂಧು ಪ್ರಶಸ್ತಿಯನ್ನು ಸಂತೆಕಟ್ಟೆ ಕೃಷ್ಣಾನುಗ್ರಹ ಸಂಸ್ಥೆಯ ಚೇರ್ಮ್ಯಾನ್ ಡಾ. ಉಮೇಶ್ ಪ್ರಭು ಅವರಿಗೆ ಪ್ರಧಾನ ಮಾಡಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಎಲ್ಲಿಯೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಇರಬಾರದು. ಶಿಕ್ಷಣದ ಜತೆಗೆ ಮೌಲ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು ಎಂದು ಡಾ.ಉಮೇಶ್ ಪ್ರಭು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

60ರ ಸಂಭ್ರಮದಲ್ಲಿರುವ ಪೇಜಾವರ ಸ್ವಾಮೀಜಿಯವರನ್ನು ಬಾಲನಿಕೇತನ ಟ್ರಸ್ಟ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಮಣಿಪಾಲ ಡಾಟ್ ನೆಟ್ ಸಿಇಓ ಡಾ. ನರಸಿಂಹ ಭಟ್‌‌ ಉಪಸ್ಥಿತರಿದ್ದರು. ಬಿ. ಕೆ‌. ನಾರಾಯಣ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಶ್ರೀ ಕೃಷ್ಣ ಬಾಲನಿಕೇತನ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರೊ. ಕಮಲಾಕ್ಷ ಸ್ವಾಗತಿಸಿ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ...

ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

ಉಡುಪಿ, ನ.26: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ...

ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.25: ಪ್ರತಿಯೊಬ್ಬರ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ...
error: Content is protected !!