ಕೋಟ, ಮೇ 1: ಪರಿಸರದಲ್ಲಿ ಮಾನವನ ಬದುಕಿನ ಹಲವು ಅನಿರೀಕ್ಷಿತ ಸಂದರ್ಭಗಳಲ್ಲಿ ಪಾಠ ನೀಡುವುದಲ್ಲದೇ, ಕೆಲವೊಂದು ಸಂದರ್ಭಗಳಲ್ಲಿ ಹೊಸ ಭರವಸೆಯನ್ನು ನೀಡುತ್ತದೆ. ಇಂತಹ ಪರಿಸರವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರಸ್ತುತ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ರವಿಕಿರಣ್ ಕೋಟ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕೋಟತಟ್ಟು ಗ್ರಾಮ ಪಂಚಾಯತ್ ಅವರ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕರಾವಳಿ ಕಣ್ಮಣಿ ಮತ್ಸೋದ್ಯಮಿ ದಿ. ಕೆ.ಸಿ ಕುಂದರ್ ಸ್ಮರಣಾರ್ಥವಾಗಿ ನಡೆಯುವ 24 ನೇ ವರ್ಷದ ಬೇಸಿಗೆ ಶಿಬಿರ ವಿಕಸನ-2024 ನಾಲ್ಕನೆ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾರಂತ ಪ್ರತಿಷ್ಠಾನದ ಟ್ರಸ್ಟಿ ಇಬ್ರಾಹೀಂ ಸಾಹೇಬ್ ಕೋಟ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಿಬಿರದ ನಿರ್ದೇಶಕ ಶ್ರೀ ನರೇಂದ್ರ ಕುಮಾರ್ ಕೋಟ, ಶ್ರೀ ಸತೀಶ್ ವಡ್ಡರ್ಸೆ, ಶಿಬಿರದ ತಂಡಗಳ ನಾಯಕರು ಉಪಸ್ಥಿತರಿದ್ದರು.
ಪರಿಸರವು ನಮ್ಮ ಬದುಕಿನ ಪಾಠದ ಪ್ರತಿಬಿಂಬ: ರವಿಕಿರಣ್ ಕೋಟ
ಪರಿಸರವು ನಮ್ಮ ಬದುಕಿನ ಪಾಠದ ಪ್ರತಿಬಿಂಬ: ರವಿಕಿರಣ್ ಕೋಟ
Date: