ಉಡುಪಿ, ಏ.30: ಮುಖ್ಯವಾಗಿ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಿ ಅವರ ಪ್ರತಿಭೆಯನ್ನು ಗುರುತಿಸುವುದಕೋಸ್ಕರ ಜಿಲ್ಲಾಮಟ್ಟದ ಭಕ್ತಿ ಗೀತೆ ಸ್ಪರ್ಧೆಯನ್ನು ಮೇ 12 ಭಾನುವಾರ ಬ್ರಾಹ್ಮಿ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಸ್ಪರ್ಧೆಯು ನಾಲ್ಕು ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳು ಕ್ರಮವಾಗಿ 5000/-, 3000/- ಮತ್ತು 2000 /- ರೂ.ಗಳ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಈ ಭಕ್ತಿಗೀತೆ ಸ್ಪರ್ಧೆಯು 5 ವರ್ಷದಿಂದ 10 ವರ್ಷದವರೆಗೆ, 10 ವರ್ಷ ಮೇಲ್ಪಟ್ಟು 15, 15 ವರ್ಷ ಮೇಲ್ಪಟ್ಟು 18 ಮತ್ತು 18 ವರ್ಷ ಮೇಲ್ಪಟ್ಟ ತ್ರಿಮತಸ್ತ ವಿಪ್ರ ಬಾಂಧವರಿಗಾಗಿ ನಡೆಯಲಿದ್ದು ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ವಲಯಗಳ ಮೂಲಕ ನಾಲ್ಕು ವಿಭಾಗಗಳಿಗೂ ಪ್ರತಿನಿಧಿಸಬೇಕಾಗಿ ಕೋರಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ ಮೇ 5 ಒಳಗಾಗಿ ಸುಮನ (9606760634) ಅಥವಾ ದಿವ್ಯ ಪಾಡಿಗಾರು (9448639910) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧಿಗಳು ಆ ದಿನ ಬೆಳಿಗ್ಗೆ ಆಧಾರ್ ಕಾರ್ಡ್ ಜೊತೆಗೆ ಒಂಬತ್ತು ಗಂಟೆಯ ಒಳಗೆ ಬಂದು ಸಹಕರಿಸಬೇಕಾಗಿ ವಿನಂತಿ. ಭಕ್ತಿ ಗೀತೆಗೆ ಶ್ರುತಿ ಪೆಟ್ಟಿಗೆಯನ್ನಷ್ಟೇ ಬಳಸಬಹುದು. ಜಿಲ್ಲಾಮಟ್ಟದ ಈ ಭಕ್ತಿ ಸಂಗೀತ ಸ್ಪರ್ಧೆಗೆ ಜಿಲ್ಲೆಯ ಎಲ್ಲಾ ಬ್ರಾಹ್ಮಣ ವಲಯಗಳು, ಒಕ್ಕೂಟಗಳು ಅಗತ್ಯವಾಗಿ ಭಾಗವಹಿಸಬೇಕಾಗಿ ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ್ ಕೆ.ಎನ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಚಂದ್ರಕಾಂತ್ ಕೆ.ಎನ್. (9449331244), ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ (9844549824) ಅಥವಾ ಕುಮಾರಸ್ವಾಮಿ ಉಡುಪ (9449059442) ಇವರನ್ನು ಕೂಡಾ ಸಂಪರ್ಕಿಸಬಹುದು.