Tuesday, January 21, 2025
Tuesday, January 21, 2025

1842 ಮತದಾನ ಕೇಂದ್ರಗಳನ್ನು ಮತಯಂತ್ರದೊಂದಿಗೆ ಮತಗಟ್ಟೆ ತಲುಪಿದ ಸಿಬ್ಭಂದಿ

1842 ಮತದಾನ ಕೇಂದ್ರಗಳನ್ನು ಮತಯಂತ್ರದೊಂದಿಗೆ ಮತಗಟ್ಟೆ ತಲುಪಿದ ಸಿಬ್ಭಂದಿ

Date:

ಉಡುಪಿ, ಏ.25: ಜಿಲ್ಲೆಯ ಪ್ರತಿಯೊಂದು ಮತದಾನ ಕೇಂದ್ರದಲ್ಲಿ ಪ್ರತಿಕ್ಷಣದ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಗುರುವಾರ ಸಂಜೆ ಎಲ್ಲಾ ಮತದಾನ ಕೇಂದ್ರಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರ ಹಾಗೂ ಮತ್ತಿತರ ಪರಿಕರಗಳನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು. ಅವರು ತಮ್ಮ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಚುನಾವಣೆ ಕುರಿತ ಮಾಹಿತಿ ಸಂಗ್ರಹಣೆಗೆ ಸ್ಥಾಪಿಸಿರುವ ವಾರ್ ರೂಮ್ ನಲ್ಲಿ ಮಾಹಿತಿಗಳನ್ನು ಪಡೆದು ಮಾತನಾಡುತ್ತಿದ್ದರು. ಗುರುವಾರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ 1842 ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಷ್ಟರಿಂಗ್ ಸೆಂಟರ್‌ನಿಂದ ಮತಯಂತ್ರಗಳು, ಚುನಾವಣೆಗೆ ಅಗತ್ಯವಿರುವ ಪರಿಕರಗಳನ್ನು ಪಡೆದು ಸಂಜೆ 4ಗಂಟೆಯ ಹೊತ್ತಿಗೆ ಶೇಕಡ 90 ರಷ್ಟು ತಲುಪಿದ್ದರು, ಸಂಜೆ 6.50 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮತದಾನ ಕೇಂದ್ರಗಳನ್ನು ಸುರಕ್ಷಿವಾಗಿ ತಲುಪಿದ ಮಾಹಿತಿ ಪಡೆಯಲಾಗಿದೆ. ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ಮಾಡಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಸಹ ಕೈಗೊಂಡಿದ್ದಾರೆ ಎಂದರು.

ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದ 866 ಮತ ಕೇಂದ್ರಗಳಿಗೆ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರಗಳನ್ನು ಕೊಂಡೊಯ್ಯಲು 252 ಜಿ.ಪಿ.ಎಸ್ ಅಳವಡಿಸಿದ ಬಸ್ ಹಾಗೂ ಇತರೆ ಲಘು ವಾಹನಗಳನ್ನು ಬಳಸಲಾಗಿತ್ತು. ಈ ವಾಹನಗಳ ಜಿ.ಪಿ.ಎಸ್ ಟ್ರಾö್ಯಕಿಂಗ್ ಅನ್ನು ವಾರ್‌ರೂಮಿನಲ್ಲಿ ಮಾಹಿತಿ ಪಡೆಯಲಾಗಿದೆ ಎಂದರು. ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳ ನೂನ್ಯತೆ, ಮತದಾನ ಕೇಂದ್ರಗಳ ಬಳಿ ಕಾನೂನು ಸುವ್ಯವಸ್ಥೆ ತೊಂದರೆ ಉಂಟಾದಲ್ಲಿ ಕ್ಷಣದಲ್ಲಿ ಮಾಹಿತಿ ಲಭ್ಯವಾಗುತ್ತಿರುವ ಹಿನ್ನಲೆ ಅಗತ್ಯ ನೆರವನ್ನು ನೀಡಲು ಕ್ರಮ ವಹಿಸಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುವು ಮಾಡಕೊಡಲಾಗುವುದು ಎಂದರು. ಪ್ರತಿ ಮತದಾನ ಕೇಂದ್ರದಿಂದ ಎರಡು ಗಂಟೆಗಳಿಗೊಮ್ಮೆ ಶೇಕಡವಾರು ಮತದಾನ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಗುವುದು ಎಂದ ಅವರು ಪ್ರತೀ ಎರಡು ಗಂಟೆಗಳಿಗೊಮ್ಮೆ ಶೇಕಡವಾರು ಮತದಾನ ವಿವರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲು ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದರು.

ಮತದಾನ ಕೇಂದ್ರಗಳ ವೆಬ್‌ಕಾಸ್ಟಿಂಗ್‌ನ ವೀಕ್ಷಿಸಲು, ವಾಹನಗಳ ಜಿ.ಪಿ.ಎಸ್ ಟ್ರಾö್ಯಕಿಂಗ್ ವ್ಯವಸ್ಥೆಯನ್ನು ವೀಕ್ಷಿಸಲು, ಇ.ವಿ.ಎಂ ಗಳ ಸಮಸ್ಯೆ ಉಂಟಾದಲ್ಲಿ ಅವುಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಬೆಳಗ್ಗೆ 5.30 ರಿಂದ ಸಂಜೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾರ್ಯನಿರ್ವಹಿಸಲಿವೆ ಎಂದರು. ಜಿಲ್ಲೆಯಲ್ಲಿ 866 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 791 ಮತಗಟ್ಟೆ ಕೇಂದ್ರಗಳಿಗೆ ವೆಬ್‌ಕಾಸ್ಟಿಂಗ್ ಅಳವಡಿಸಿದ್ದು, ಈ ಮತಗಟ್ಟೆಗಳಲ್ಲಿ ನಡೆಯುವ ಪ್ರತಿಯೊಂದು ಕ್ಷಣವನ್ನು ನೇರವಾಗಿ ವಾರ್‌ರೂಮಿನಿಂದ ವೀಕ್ಷಿಸಲಾಗುವುದು ಎಂದರು. ಕೈಗಾರಿಕಾ ಕೆಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ
ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾಧಿಕಾರಿ ಕಚೇರಿಯ ವಾರ್ ರೂಮ್ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!