Thursday, January 23, 2025
Thursday, January 23, 2025

ಮಣಿಪಾಲ: ಅಂಚೆ ಮತದಾನ ಕೇಂದ್ರ ಸ್ಥಾಪನೆ

ಮಣಿಪಾಲ: ಅಂಚೆ ಮತದಾನ ಕೇಂದ್ರ ಸ್ಥಾಪನೆ

Date:

ಉಡುಪಿ, ಏ.18: ಭಾರತೀಯ ಚುನಾವಣಾ ಆಯೋಗವು 16 ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಸೂಚಿಸಿದ್ದು, ಮತದಾನದ ದಿನದಂದು ಯಾವುದೇ ಕರ್ತವ್ಯದಲ್ಲಿದ್ದರೆ ಈ ಇಲಾಖೆಗಳಲ್ಲಿ ಕೆಲಸ ಮಾಡುವ ಮತದಾರರನ್ನು ಗೈರು ಹಾಜರಾದ ಮತದಾರರು ಎಂದು ವರ್ಗೀಕರಿಸಲಾಗಿದೆ ಮತ್ತು ಅಂತಹ ಮತದಾರರು ಅಂಚೆ ಮತದಾನಕ್ಕೆ ಅರ್ಹರಿದ್ದು, ಜಿಲ್ಲಾ ಚುನಾವಣಾಧಿಕಾರಿಯು ತಮ್ಮ ಕಚೇರಿಯಲ್ಲಿ ಎ.ವಿ.ಇ.ಎಸ್ ವರ್ಗಕ್ಕೆ ಮತದಾನ ಮಾಡಲು ಅನುಕೂಲವಾಗುವಂತೆ ಪೋಸ್ಟಲ್ ವೋಟಿಂಗ್ ಸೆಂಟರ್ ಅನ್ನು ಸ್ಥಾಪಿಸಿರುತ್ತಾರೆ. ಅದರಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅಗತ್ಯ ಸೇವಾ ಪ್ರವರ್ಗದಲ್ಲಿ ಬರುವ ಗೈರು ಹಾಜರಿ ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅನುಕೂಲವಾಗುವಂತೆ ಏಪ್ರಿಲ್ 19 ರಿಂದ 21 ರ ವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎ ಬ್ಲಾಕ್ ನೆಲಮಹಡಿಯ ಕೊಠಡಿ ಸಂಖ್ಯೆ ಎ-102 ನಲ್ಲಿ ಪೋಸ್ಟಲ್ ಬ್ಯಾಲೆಟ್ ವೋಟಿಂಗ್ ಸೆಂಟರ್ ಅನ್ನು ತೆರೆಯಲಾಗಿದ್ದು, ಪಿ.ವಿ.ಸಿ ಕೇಂದ್ರದ ಎ.ಆರ್.ಓ ಆಗಿ ಜಯಮಾಧವ ಮೊ.ನಂ: 9448888282 ಅವರನ್ನು ನಿಯೋಜಿಸಲಾಗಿರುತ್ತದೆ ಹಾಗೂ ಪಿ.ವಿ.ಸಿ ತಂಡದಲ್ಲಿ ಮುಖ್ಯಸ್ಥರಾಗಿ ಡಿ.ಡಿ.ಎಲ್.ಆರ್ ರವೀಂದ್ರ ಮೊ.ನಂ: 8660523556, ಸಹಾಯಕರಾಗಿ ರಾಘವೇಂದ್ರ ಪ್ರಭು ಮೊ.ನಂ: 8861577724, ರಾಹುಲ್ ರಾವ್ ಮೊ.ನಂ: 8217658577 ಮತ್ತು ದಿವಾಕರ್ ಮೊ.ನಂ: 9964605683 ಅವರನ್ನು ನಿಯೋಜಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!