ಕಟಪಾಡಿ, ಏ.15: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯದ ಪದವಿ ಕಾಲೇಜಿನಲ್ಲಿ ಒಂದು ವಾರಗಳ ಕಾಲ ಎನ್.ಎಸ್.ಎಸ್ ಶಿಬಿರ ನಡೆಯಿತು. ಕಾಲೇಜು ಆಡಳಿತ ಮಂಡಳಿ ಖಜಾಂಚಿ ಲಕ್ಷ್ಮಿನಾರಾಯಣ ಉಪಾಧ್ಯ ಕಾರ್ಯಕ್ರಮ ಉದ್ಘಾಟಿಸಿ ಶಿಬಿರದಿಂದಾಗುವ ಉಪಯೋಗದ ಬಗ್ಗೆ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ವಕ್ಷತ್ ಸಾಲಿಯಾನ್ ಹಾಗೂ ಉಪನ್ಯಾಸಕಿ ಸುಕನ್ಯಾ, ಸಂಯೋಜಕಿ ರಕ್ಷಿತಾ ನೇತೃತ್ವದಲ್ಲಿ ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಚುನಾವಣೆಯ ಮಹತ್ವ ಸಾರುವ ಬೀದಿ ನಾಟಕ, ಮಟ್ಟು ಬೀಚ್ ಸ್ವಚ್ಚಗೊಳಿಸುವಿಕೆ, ರಸ್ತೆ ಸುರಕ್ಷತೆಯ ಜಾಗೃತಿ, ಮತ್ತು ಸುಭಾಷ್ ನಗರ ರಸ್ತೆ ಸುತ್ತಲಿನ ಪರಿಸರ ಸ್ವಚ್ಛತೆ, ಶಾಲಾ ಆವರಣ ಸ್ವಚ್ಛತೆ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲ ವಿಜಯ್ ಪಿ ರಾವ್, ಆನಂದತೀರ್ಥ ವಿದ್ಯಾಲಯ ಪ್ರಾಂಶುಪಾಲೆ ಡಾ. ಗೀತಾ ಎಸ್. ಕೋಟ್ಯಾನ್, ಪದವಿ ಕಾಲೇಜು ಸಂಯೋಜಕಿ ರಕ್ಷಿತ, ಎನ್.ಎಸ್.ಎಸ್ ಸಂಯೋಜಕಿ ಸುಕನ್ಯಾ, ಎನ್.ಎಸ್.ಎಸ್ ವಿದ್ಯಾರ್ಥಿ ಮುಖಂಡರಾದ ರೇವಿತ್, ಹಾಗೂ ರಮ್ಯಾ ಪೂಜಾರ, ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಶಿಬಿರ
ಪಾಜಕ ಶ್ರೀ ವಿಶ್ವೇಶತೀರ್ಥ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಶಿಬಿರ
Date: