ಕೋಟ, ಏ.2: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗಾಗಿಯೇ ಸೂಕ್ತ ಸ್ಥಾನಮಾನಗಳಿವೆ. ಅವುಗಳನ್ನು ಯಾವ ಹಿಂಜರಿಕೆಯಿಲ್ಲದೇ ಸೂಕ್ತವಾಗಿ ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಸಾಧನೆಗಳು ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುತ್ತಿರುವುದು ಸಂತಸದ ವಿಷಯ. ಡಾ. ಶಿವರಾಮ ಕಾರಂತ ಸ್ತ್ರೀ ಸಾಧಕ ಪುರಸ್ಕಾರದ ಮೂಲಕ ಮಹಿಳಾ ಸಾಧಕರನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕವಿಗೋಷ್ಠಿ, ಗಾನಮೃತ, ಡಾ. ಕಾರಂತ ಸ್ತ್ರೀ ಪುರಸ್ಕಾರ ಪ್ರದಾನ ಕಾರ್ಯಕ್ರಮ ‘ಅಮ್ಮಾ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಭಾರತಿ ಮಯ್ಯ, ವಾಸಂತಿ ಅಂಬಲಪಾಡಿ, ನಾಗರತ್ನ ಗುಂಡ್ಮಿ, ಪ್ರೇಮ ಬಾರ್ಕೂರು, ವಿಜಯಲಕ್ಷ್ಮಿ ಮೆಟ್ಟಿನಹೊಳೆ, ಲಿಖಿತ ಶೆಟ್ಟಿ, ಶರಣ್ಯ ಭಟ್, ಸುಮಿತಾ ಶೆಟ್ಟಿ ಉಪ್ಪುಂದ, ಯಶೋಧ ಗಾಣಿಗ, ಸುಷ್ಮಾ ಆಚಾರ್, ಅಮೃತ ಉಪಾಧ್ಯ, ಅಮಿತಾಂಜಲಿ ಕಿರಣ್, ಸದಾರಮೆ ಕಾರಂತ, ಪೂರ್ಣಿಮಾ ಪ್ರಕಾಶ್, ಪ್ರೇಮ ಪೂಜಾರಿ ಕುಂಭಾಶಿ, ಸಂಗೀತ ಹರ್ತಟ್ಟು, ಆಶಾ ರೋಹನ್ ವಾಜ್ ಉದ್ಯಾವರ ಹಾಗೂ ಡಾ. ಶಿವರಾಮ ಕಾರಂತ ವಿಶೇಷ ಸಾಧಕ ಸ್ತ್ರೀ ಪುರಸ್ಕಾರವನ್ನು ಕುಂದಾಪುರದ ವಿಶೇಷ ಚೇತನ ಯುವತಿ ಸೃಜನಾ ಎಸ್ ಪಿ ಅವರಿಗೆ ಪ್ರದಾನ ಮಾಡಲಾಯಿತು.
ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ನಿವೃತ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್, ಸುಬ್ರಾಯ್ ಆಚಾರ್ಯ, ಸಾಂಸ್ಕೃತಿಕ ಚಿಂತಕರಾದ ಗೀತಾ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್ ಉಪಸ್ಥಿತರಿದ್ದರು. ಜ್ಯೋತಿ ಸಾಲಿಗ್ರಾಮ ಹಾಗೂ ಅನಿತಾ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು.