ತೆಂಕನಿಡಿಯೂರು, ಮಾ.27: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಐಕ್ಯೂಎಸಿ ಮತ್ತು ಅಭ್ಯುದಯ ಸಮಾಜಕಾರ್ಯ ವೇದಿಕೆ – ಸಮಾಜಕಾರ್ಯ ವಿಭಾಗ ಇದರ ಸಹಯೋಗದಲ್ಲಿ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ‘ಆಪ್ತ ಸಮಾಲೋಚನೆಯ ತಂತ್ರಗಳು ಮತ್ತು ಸೇವೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ದೊಡ್ಡಣಗುಡ್ಡೆಯ ಡಾ. ಎ.ವಿ.ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ಆಡಳಿತಾಧಿಕಾರಿ ಮತ್ತು ಮೆಡಿಕಲ್ ಸೋಶಿಯಲ್ ವರ್ಕರ್ ಸೌಜನ್ಯ ಕೆ. ಶೆಟ್ಟಿ ಇವರು ಆಪ್ತ ಸಮಾಲೋಚನೆಯ ಮಹತ್ವ ಹಾಗೂ ಪ್ರಸ್ತುತ ಸಮಾಜದಲ್ಲಿ ಎದುರಾಗುತ್ತಿರುವ ವ್ಯಸನಗಳಿಗೆ ಸಾಮಾಜಿಕ ಕಾರ್ಯಕರ್ತರ ನೆಲೆಯಲ್ಲಿ ಹೇಗೆ ಅದನ್ನು ನಿರ್ವಹಿಸಬೇಕು ಹಾಗೂ ವೃತ್ತಿ ಬದುಕಿನಲ್ಲಿ ತಮ್ಮ ಕಾರ್ಯನಿರ್ವಹಣೆ ಮತ್ತು ಕೌಶಲ್ಯಗಳನ್ನು ಅಭಿವೃದ್ದಿಪಡಿಸಿಕೊಡಿಸುವುದರ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಪದವಿ ಸಮಾಜಕಾರ್ಯ ವಿಭಾಗದ ಮುಖ್ಯುಸ್ಥರಾದ ಮಮತಾ, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಷ್ಮಾ ಟಿ., ಡಾ. ಪ್ರಮೀಳಾ ಜೆ. ವಾಸ್ ಉಪಸ್ಥಿತರಿದ್ದರು. ಸಾಕ್ಷಿ ಎ. ಶೆಟ್ಟಿ ಸ್ವಾಗತಿಸಿ, ಸಮಾಜಕಾರ್ಯ ವೇದಿಕೆ ಉಪಾಧ್ಯಕ್ಷರಾದ ದಾಕ್ಷಾಯಿನಿ ತೃತೀಯ ಬಿ.ಎಸ್.ಡಬ್ಲ್ಯೂ ವಂದಿಸಿದರು. ಅಂತಿಮ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು.