ಉಡುಪಿ: ಸಾಹಿತಿ ಗುರುರಾಜ ಮಾರ್ಪಳ್ಳಿ ಅವರ ಕೊಳಲಿನ ಸ್ವರಗಳು ಅನುಭವ ಕಥನ ಪುಸ್ತಕವನ್ನು ಹಿರಿಯ ಸಾಹಿತಿ ವೈದೇಹಿಯವರು ಮಣಿಪಾಲದ ಇರುವಂತಿಗೆ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ಕಲೆಯ ಪ್ರಪಂಚದ ಉನ್ನತ ಸಾಧಕರ ಅನುಭವಗಳ ದಾಖಲೆಗಳು ವರ್ತಮಾನ ಜಗತ್ತಿಗೆ ಅಗತ್ಯವಾಗಿದ್ದು ಅವುಗಳಿಂದ ಹೊಸ ಜನಾಂಗ ಪ್ರೇರಣೆ ಪಡೆಯಲು ಸಾಧ್ಯ ಎಂದು ಕೃತಿಯ ಬಗ್ಗೆ ವೈದೇಹಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುರಾಜ ಮಾರ್ಪಳ್ಳಿ ಮಾತನಾಡುತ್ತಾ, ತಾನು ಬರೆಯಲು ವೈದೇಹಿಯವರ ಪ್ರೇರಣೆಯೇ ಕಾರಣವಾಗಿತ್ತು. ಕಲೆಯ ಪ್ರಪಂಚದಲ್ಲಿ ಕೆಲಸ ಮಾಡಿದ ಶ್ರೇಷ್ಠ ವ್ಯಕ್ತಿತ್ವಗಳಾದ ಕಾರಂತ, ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ ಮುಂತಾದವರ ಜೊತೆಗೆ ಪಡೆದ ನೆನಪುಗಳನ್ನು ಹಂಚಿಕೊಂಡರು. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಎಚ್. ಪಿ ಉಪಸ್ಥಿತರಿದ್ದರು.