ಉಡುಪಿ, ಮಾ.7: ಭಾರತೀಯ ದಂತವೈದ್ಯರ ಸಂಘ ಉಡುಪಿ ಇವರ ವತಿಯಿಂದ ರಾಜ್ಯಮಟ್ಟದ ಪದಾಧಿಕಾರಿಗಳ ಕಾರ್ಯಗಾರ ಮಣಿಪಾಲದ ವ್ಯಾಲಿವ್ಯೂ ಕಂಟ್ರಿ ಕ್ಲಬ್ ನಲ್ಲಿ ನಡೆಯಿತು. ಭಾರತೀಯ ದಂತವೈದ್ಯ ಸಂಘದ ರಾಜ್ಯಾಧ್ಯಕ್ಷ ಡಾ. ಭರತ್ ಎಸ್.ವಿ. ಸಮಾರಂಭ ಉದ್ಘಾಟಿಸಿದರು. ಡಾ. ರಂಗನಾಥ್ ವಿ. ಹಾಗೂ ಡಾ. ಶ್ರೀನಿಧಿ ಡಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಹೊಸ ತಂತ್ರಜಾನವನ್ನು ಅಳವಡಿಸಕೊಳ್ಳುವ ಬಗ್ಗೆ ವಿಸೃತ ಚರ್ಚೆ ನಡೆಯಿತು. ಭಾರತೀಯ ದಂತವೈದ್ಯ ಸಂಘ ಉಡುಪಿ ಅಧ್ಯಕ್ಷ ಡಾ. ಜಗದೀಶ್ ಜೋಗಿ, ಕೋಶಾಧಿಕಾರಿ ಡಾ. ವಿಜೇಶ್ ಶೆಟ್ಟಿ, ಡಾ. ಶಿವಶರಣ್ ಶೆಟ್ಟಿ, ಡಾ. ವಿಜಯೇಂದ್ರ ವಸಂತ್ ರಾವ್, ಡಾ. ಪ್ರಮೋದ್ ಶೆಟ್ಟಿ, ಡಾ. ಸಂಜಯ್ ಕುಮಾರ್, ಡಾ. ನರೇಂದ್ರ ಹಾಗೂ ಡಾ. ಸಚಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತೀಯ ದಂತವೈದ್ಯ ಸಂಘದ ರಾಜ್ಯ ಕಾರ್ಯದರ್ಶಿ ಡಾ. ಮಹೇಶ್ಚಂದ್ರ ವಂದಿಸಿದರು. ಉಡುಪಿ ಜಿಲ್ಲಾ ಶಾಖಾ ಕಾರ್ಯದರ್ಶಿ ಡಾ. ಅತುಲ್ ಯು. ಆರ್ ಕಾರ್ಯಕ್ರಮ ನಿರೂಪಿಸಿದರು.