Tuesday, January 21, 2025
Tuesday, January 21, 2025

ಸರ್ಕಾರದಿಂದ ದೇವದಾಸಿಯರಿಗೆ ನೀಡುವ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ

ಸರ್ಕಾರದಿಂದ ದೇವದಾಸಿಯರಿಗೆ ನೀಡುವ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ

Date:

ಮಣಿಪಾಲ, ಮಾ.2: ಅಧ್ಯಯನಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 80,000 ದೇವದಾಸಿಯರಿದ್ದಾರೆ. ಆದರೆ ಅವರಲ್ಲಿ ಅರ್ಧದಷ್ಟು ಜನರು ಮಾತ್ರ ಸರ್ಕಾರದಿಂದ ಗುರುತಿಸಲ್ಪಟ್ಟಿದ್ದಾರೆ ಎಂದು ಸಂಶೋಧಕಿ-ಚಲನಚಿತ್ರ ನಿರ್ದೇಶಕಿ ಪೂರ್ಣಿಮಾ ರವಿ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮಾಹೆ, ಆಶ್ರಯದಲ್ಲಿ ತಮ್ಮ ‘ಗಾಡ್ಸ್ ವೈವ್ಸ್, ಮೆನ್ಸ್ ಸ್ಲೇವ್ಸ್’ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ ಚರ್ಚೆಯಲ್ಲಿ ಭಾಗವಹಿಸಿದರು. ಸರ್ಕಾರದ ದಾಖಲೆಗಳಲ್ಲಿ ಅರ್ಧದಷ್ಟು ದೇವದಾಸಿಯರೂ ಇಲ್ಲದೇ ಇರುವುದರಿಂದ ಅವರಿಗೆ ಸರ್ಕಾರದಿಂದ ದೇವದಾಸಿಯರಿಗೆ ನೀಡುವ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ. ಅವರೆಲ್ಲರನ್ನು ಸೇರಿಸಲು ಪರಿಷ್ಕೃತ ಸಮೀಕ್ಷೆ ಆಗಬೇಕು ಮತ್ತು ಅವರ ಪುನರ್ವಸತಿಗೆ ತಕ್ಷಣದ ಕ್ರಮಗಳು ಇರಬೇಕು ಎಂದು ಅವರು ಒತ್ತಾಯಿಸಿದರು.

ಲೇಖಕಿ ಸುಧಾ ಮೂರ್ತಿ ಅವರ ‘ತ್ರೀ ಥೌಸಂಡ್ ಸ್ಟಿಚಸ್’ ಕೃತಿಯನ್ನು ಓದಿದ ನಂತರ ಪ್ರಭಾವಿತರಾಗಿ ಈ ಕೆಲಸ ಕೈಗೊಂಡ ಸಂಶೋಧಕಿ ಪೂರ್ಣಿಮಾ ರವಿ, ಕರ್ನಾಟಕ ಮತ್ತು ಭಾರತದ ಅನೇಕ ಭಾಗಗಳಲ್ಲಿ ದೇವದಾಸಿಯರ ವ್ಯವಸ್ಥೆಯು ಅದರ ಅವನತಿ ರೂಪದಲ್ಲಿ ಇನ್ನೂ ಹೇಗೆ ಚಾಲ್ತಿಯಲ್ಲಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 4,50,000 ದೇವದಾಸಿಯರಿದ್ದಾರೆ” ಎಂದು ಅವರು ಉಲ್ಲೇಖಿಸಿದರು. ಅವರಿಗೆ ಪುನರ್ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಈ ಅಭ್ಯಾಸದಲ್ಲಿ ತೊಡಗಿರುವ ಪುರುಷರು ಮತ್ತು ಮಹಿಳೆಯರು ಈ ನಿಟ್ಟಿನಲ್ಲಿ ಶಿಕ್ಷಣ ಪಡೆಯಬೇಕು. ನಮ್ಮ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಪದ್ಧತಿ ಅಡಕವಾಗಿರುವ ಕಾರಣ ಸುಧಾರಣೆಯಲ್ಲಿ ಗಂಭೀರ ಸವಾಲುಗಳಿವೆ ಎಂದು ಪೂರ್ಣಿಮಾ ರವಿ ಅಭಿಪ್ರಾಯಪಟ್ಟರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಾಕ್ಷ್ಯಚಿತ್ರವು ಎಲ್ಲಾ ವಿವರಗಳೊಂದಿಗೆ ವಾಸ್ತವವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತದೆ ಎಂದರು. ನಿರ್ಮಾಪಕ ರವಿನಾರಾಯಣ, ಛಾಯಾಗ್ರಾಹಕ ನಿಹಾಲ್ ನೂಜಿಬೈಲ್, ಪ್ರೊ. ಗುರ್ಬುಜ್ ಅಕ್ತಾಸ್, ಡಾ. ಅರವಿಂದ ಹೆಬ್ಬಾರ್, ಪ್ರೊ. ಎಂ.ಎಲ್.ಸಾಮಗ, ವಿದುಷಿ ಪ್ರತಿಭಾ ಸಾಮಗ, ಡಾ. ಭ್ರಾಮರಿ ಶಿವಪ್ರಕಾಶ್, ವಿದುಷಿ ಮಾನಸಿ ಸುಧೀರ್, ಪ್ರೊ. ಸುಧಾಕರರಾವ್ ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಗೌತಮಿ ಕಾರ್ಯಕ್ರಮ ನಿರೂಪಿಸಿದರು. ವೆಲಿಕಾ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!