Sunday, September 8, 2024
Sunday, September 8, 2024

ಭಾರತೀಯತೆಯ ಪುನರುತ್ಥಾನದ ಸಂಕೇತವೇ ಅಯೋಧ್ಯೆ ರಾಮ ಮಂದಿರ: ಪತ್ರಕರ್ತ ಅಜಿತ್ ಹನುಮಕ್ಕನವರ್

ಭಾರತೀಯತೆಯ ಪುನರುತ್ಥಾನದ ಸಂಕೇತವೇ ಅಯೋಧ್ಯೆ ರಾಮ ಮಂದಿರ: ಪತ್ರಕರ್ತ ಅಜಿತ್ ಹನುಮಕ್ಕನವರ್

Date:

ಉಡುಪಿ, ಫೆ.25: (ಉಡುಪಿ ಬುಲೆಟಿನ್ ವರದಿ) ಕೂರ್ಮ ಬಳಗದ ವತಿಯಿಂದ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಆಜಾದ್ ಹಿಂದ್ ಶಿವಾಜಿಯಿಂದ ನೇತಾಜಿವರೆಗೆ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು.

ಶಿವಾಜಿ ಮಹಾರಾಜರ ಸಪ್ತ ಸೂತ್ರಗಳನ್ನು ಮೈಗೂಡಿಸಿಕೊಳ್ಳಿ: ಡಾ. ಸಂದೀಪ್ ಮಹಿಂದ್ ಗುರೂಜಿ

ಸಂಶೋಧಕರು ವಾಗ್ಮಿಗಳೂ ಆಗಿರುವ ಡಾ. ಸಂದೀಪ್ ಮಹಿಂದ್ ಮಾತನಾಡುತ್ತಾ, ಛತ್ರಪತಿ ಶಿವಾಜಿ ಮತ್ತು ನೇತಾಜಿ ಸುಭಾಶ್ಚಂದ್ರ ಬೋಸ್ ಅವರಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಅವರಿಬ್ಬರ ಜೀವನಶೈಲಿ ಇಂದಿಗೂ ನಮಗೆ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಶಿವಾಜಿಯವರ ಸ್ವಾಭಿಮಾನದ ಸಂಕೇತವಾದ ಸಪ್ತ ಸೂತ್ರಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ರಾಮರಾಜ್ಯದ ಕನಸು ನನಸಾಗುವುದು ಎಂದರು.

ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡುತ್ತಾ, ಭಾರತೀಯತೆಯ ಪುನರುತ್ಥಾನ ಅಯೋಧ್ಯೆಯ ಮಂದಿರದಿಂದ ಆಗಿದೆ. ಯಾವ ಭವ್ಯ ಇತಿಹಾಸವನ್ನು ಪಠ್ಯಪುಸ್ತದಲ್ಲಿ ಪ್ರಕಟಿಸಲಿಲ್ಲವೋ ಅವುಗಳು ಇಂದು ಅಂತರ್ಜಾಲದಲ್ಲಿ ಲಭ್ಯವಾಗುತ್ತಿವೆ. ತನ್ಮೂಲಕ ರಾಷ್ಟ್ರೀಯತೆಯ ಚಿಂತನಾ ಶೈಲಿ ಹರಡುತ್ತಿದೆ. ಇದು ಒಳ್ಳೆಯ ವಿಚಾರ.

ಭಾರತ ಶಕ್ತಿಯುತವಾದಾಗ ಇತರರ ಮೇಲೆ ದೌರ್ಜನ್ಯ ಮಾಡಲಿಲ್ಲ, ಬೆಳಕಾಗಿ ನಿಂತಿದೆ: ಅಜಿತ್ ಹನುಮಕ್ಕನವರ್

ಜಗತ್ತಿನ ಹಲವು ನಾಗರಿಕತೆಗಳು ಕೆಲವೇ ವರ್ಷಗಳಲ್ಲಿ ಹೇಳ ಹೆಸರಿಲ್ಲದೆ ನಶಿಸಿ ಹೋಗಿವೆ. ಆದರೆ ಭಾರತದ ನಾಗರಿಕತೆ, ನಮ್ಮ ಸಂಸ್ಕೃತಿಯ ಮೇಲೆ ಎಷ್ಟೇ ದಾಳಿಗಳಾದರೂ ಅಚಲವಾಗಿ ನಿಂತಿದೆ. ಇದರ ಬಗ್ಗೆ ಹೆಮ್ಮೆ ಪಡಬೇಕು ಎಂದರು. ಭಾರತ ಶಕ್ತಿಯುತವಾದಾಗ ಇತರರ ಮೇಲೆ ದೌರ್ಜನ್ಯ ಮಾಡಲಿಲ್ಲ, ಬೇರೆ ರಾಷ್ಟ್ರದ ಮೇಲೆ ಆಕ್ರಮಣ ಮಾಡಿಲ್ಲ, ಇತರ ರಾಷ್ಟ್ರಗಳಿಗೆ ಭಾರತ ಬೆಳಕಾಗಿದೆ. ಈಗ ನಮ್ಮ ಸಮಯ ಬಂದಿದೆ ಎಂಬ ವಿಚಾರಕ್ಕೆ ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಅಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ಬಂದರು. ಇತರ ದೇಶದವರೂ ಕೂಡ ‘ಕ್ಯಾನ್ ಯು ಗಿವ್ ಯುವರ್ ಫ್ಲಾಗ್’ ಎಂದು ದಾಳಿಯಿಂದ ತಪ್ಪಿಸಲು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಅಜಿತ್ ಹನುಮಕ್ಕನವರ್ ಹೇಳಿದರು.

ಛತ್ರಪತಿ ಶಿವಾಜಿ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ: ಅಜಯ್ ಪಿ. ಶೆಟ್ಟಿ

ಉದ್ಯಮಿ ಅಜಯ್ ಪಿ ಶೆಟ್ಟಿ ಮಾತನಾಡುತ್ತಾ, ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯದ ಬೀಜವನ್ನು ಬಿತ್ತಿದ್ದರು. ತಂತ್ರಜ್ಞಾನ ಅಷ್ಟೊಂದು ಬೆಳೆಯದ ಅಂದಿನ ಕಾಲದಲ್ಲಿ ಬಲಿಷ್ಠ ನೌಕಾಪಡೆಯನ್ನು ಹೊಂದಿದ್ದ ಶಿವಾಜಿ, ಗಂಗೊಳ್ಳಿಯ ಬಳಿ ಬಸ್ರೂರಿನ ಬಂದರನ್ನು ಪೋರ್ಚುಗೀಸರ ನಿಯಂತ್ರಣದಿಂದ ಮುಕ್ತವಾಗಿಸಿದರು. ಛತ್ರಪತಿ ಶಿವಾಜಿ ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಅವರ ರಾಮರಾಜ್ಯದ ಕನಸು ನನಸಾಗಲಿದೆ ಎಂದರು.

ಖ್ಯಾತ ಗಾಯಕ ರಜತ್ ಮಯ್ಯ ಮತ್ತು ತಂಡದವರಿಂದ ‘ಸ್ವರಭಾರತಿ’ ರಾಷ್ಟ್ರಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು. ಮಂಜರಿಚಂದ್ರ ಮತ್ತು ತಂಡದವರಿಂದ ‘ನಮೋ ನಮೋ ಭಾರತಾಂಬೆ’ ‘ಸ್ವರಾಜ್ಯಾಭಿಷೇಕಂ’ ‘ಆಜಾದ್ ರಹೇ ತು’ ನೃತ್ಯ ರೂಪಕ ಪ್ರದರ್ಶಿಸಲಾಯಿತು. ಕೂರ್ಮ ಬಳಗದ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ...

ಸುಳ್ಳು ದಾಖಲೆ ಸೃಷ್ಟಿ: ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಸೇವೆಯಿಂದ ಬಿಡುಗಡೆ

ನವದೆಹಲಿ, ಸೆ.7: 2023 ರ ಬ್ಯಾಚ್ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್...

18ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ

ಬೆಳ್ಮಣ್, ಸೆ.7: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಮದ್ಯ ಮಾರಾಟ ನಿಷೇಧ

ಉಡುಪಿ, ಸೆ.6: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ...
error: Content is protected !!