ಉಡುಪಿ, ಫೆ.22: ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಉಪನ್ಯಾಸಕರಾದ ಸವಿತಾ ಎರ್ಮಾಳ್ ಇವರನ್ನು ‘ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ’ (ಬೇಟಿ ಬಚಾವೊ ಬೇಟಿ ಪಡಾವೊ) ಮತ್ತು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ರಾಯಭಾರಿಯಾಗಿ ಉಡುಪಿ ಜಿಲ್ಲಾಧಿಕಾರಿಯವರಾದ ಡಾ.ಕೆ.ವಿದ್ಯಾಕುಮಾರಿ ಆಯ್ಕೆ ಮಾಡಿರುತ್ತಾರೆ. ಇವರು ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬ್ರಹ್ಮಾವರ ಇದರ ಕಾರ್ಯದರ್ಶಿಯಾಗಿರುವರು. ಶ್ರೀ ಶಾಂಕರತತ್ವ ಪ್ರಸಾರ ಸಮಿತಿ ಉಡುಪಿ ಜಿಲ್ಲೆಯ ಸಹಸಂಚಾಲಕರಾಗಿರುವರು. ಬ್ರಹ್ಮಾವರದ ಸಮಿತಿಯ ಕಾರ್ಯದರ್ಶಿಯಾಗಿರುವರು. ಅಲ್ಲದೆ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ) ಇದರ ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು ಇದರ ಮಂಗಳೂರು ವಿಭಾಗದ ವಿಭಾಗಾಧಿಕಾರಿಯಾಗಿ ನಿರ್ದೇಶಕರು ನಿಯೋಜಿಸಿರುವರು.
ಸವಿತಾ ಎರ್ಮಾಳ್ ರಾಯಭಾರಿಯಾಗಿ ಆಯ್ಕೆ
ಸವಿತಾ ಎರ್ಮಾಳ್ ರಾಯಭಾರಿಯಾಗಿ ಆಯ್ಕೆ
Date: