Wednesday, January 22, 2025
Wednesday, January 22, 2025

ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರದ ಸಂತಾನೋತ್ಪತ್ತಿ ಕಾರ್ಯವಿಧಾನದ ಮೂಲಕ 11,000 ಕ್ಕೂ ಹೆಚ್ಚು ಶಿಶುಗಳ ಜನನ

ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರದ ಸಂತಾನೋತ್ಪತ್ತಿ ಕಾರ್ಯವಿಧಾನದ ಮೂಲಕ 11,000 ಕ್ಕೂ ಹೆಚ್ಚು ಶಿಶುಗಳ ಜನನ

Date:

ಮಣಿಪಾಲ, ಫೆ.20: ಕಸ್ತೂರ್ಬಾ ಆಸ್ಪತ್ರೆ ಮಾಹೆ ಮಣಿಪಾಲದ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರವು ಸಂತಾನಹೀನ ದಂಪತಿಗಳಿಗೆ ನೀಡುತ್ತಿರುವ ಯಶಸ್ವಿ ಸೇವೆಯ 35ನೇ ವರ್ಷದ ಆಚರಣೆಯನ್ನು ಫೆಬ್ರವರಿ 18, 2024 ರಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ ಟಿಎಂಎ ಪೈ ಆಡಿಟೋರಿಯಂನಲ್ಲಿ ಆಚರಿಸಿತು. ಮಣಿಪಾಲದ ಪ್ರಥಮ ಮಹಿಳೆ ವಸಂತಿ ಆರ್ ಪೈ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರ (ಮಾರ್ಕ್)ದ ಮೂಲಕ ಜನಿಸಿದ ಮೊದಲ ಇನ್ ವಿಟ್ರೋ ಫರ್ಟಿಲೈಸೇಶನ್ ಮಗುವಿನ 25 ನೇ ಹುಟ್ಟುಹಬ್ಬವನ್ನು ಆಚರಿಸಲು ಕೇಕ್ ಕತ್ತರಿಸುವ ಸಮಾರಂಭದಲ್ಲಿ ಭಾಗವಹಿಸಿದರು.

ಬಂಜೆತನ ಚಿಕಿತ್ಸೆಯಲ್ಲಿ ಪ್ರವರ್ತಕರಾದ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರ (ಮಾರ್ಕ್)ವು, ತನ್ನ ಸಂತಾನೋತ್ಪತ್ತಿ ಕಾರ್ಯವಿಧಾನದ ಮೂಲಕ 11,000 ಶಿಶುಗಳ ಜನನವನ್ನು ಹೆಮ್ಮೆಯಿಂದ ಘೋಷಿಸಿತು. ಇದು ಕೇಂದ್ರವು ಬಂಜೆತನದ ದಂಪತಿಗಳಿಗೆ ನೀಡುತ್ತಿರುವ ತನ್ನ ಬದ್ಧತೆಗೆ ಹಾಗೂ ಸೇವೆಗಳಿಗೆ ಸಾಕ್ಷಿಯಾಗಿದೆ. “ಮಾರ್ಕ್ ದಿನ ” ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿವಿಧ ಮನರಂಜನಾ ಆಟಗಳನ್ನು ಒಳಗೊಂಡಿತ್ತು. ಇದು ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು. 25 ವರ್ಷ ವಯಸ್ಸಿನ ಮೊದಲ ಐವಿಎಫ್ ಮಗು ಸೇರಿದಂತೆ ಸಹಾಯಿತಾ ಸಂತಾನೋತ್ಪತ್ತಿ ಕಾರ್ಯವಿಧಾನಗಳಿಂದ ಜನಿಸಿದ ಅನೇಕ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು, ಪುರುಷ ಸಂತಾನಹೀನತೆಯ ಮೌಲ್ಯಮಾಪನಕ್ಕಾಗಿ ಸಂಪೂರ್ಣ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲಯ, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಶೇಖರಣೆಗಾಗಿ ವೀರ್ಯ ಬ್ಯಾಂಕಿಂಗ್ ಮತ್ತು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮುಂದುವರಿದ ಭ್ರೂಣಶಾಸ್ತ್ರ ಪ್ರಯೋಗಾಲಯಗಳು ಸೇರಿದಂತೆ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳ ಕುರಿತು ಮಾತನಾಡಿದರು. ಕೇಂದ್ರವು ಫಲವತ್ತತೆ ವರ್ಧನೆಗಾಗಿ ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಪರಿಣತಿಯನ್ನು ಹೊಂದಿದೆ ಎಂದರು. ಸಂತಾನೋತ್ಪತ್ತಿ ಔಷಧಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಪ್ರತಾಪ್ ಕುಮಾರ್ ಅವರು, 1990 ರಲ್ಲಿ ಪ್ರಾರಂಭವಾದಾಗಿನಿಂದ ಮಾರ್ಕ್ ನ ಪ್ರಯಾಣದ ಕುರಿತು ಅವಲೋಕನ ನೀಡಿದರು. ಕೇಂದ್ರವು ಮೊದಲು ಸರಳವಾದ ಕಾರ್ಯವಿಧಾನಗಳೊಂದಿಗೆ ಪ್ರಾರಂಭವಾಯಿತು ಮತ್ತು ನಂತರ 1998 ರಲ್ಲಿ ಟೆಸ್ಟ್ ಟ್ಯೂಬ್ ಬೇಬಿ ಕಾರ್ಯವಿಧಾನವನ್ನು ಪ್ರಾರಂಭಿಸಿತು.

ಐವಿಎಫ್ ಪ್ರಕ್ರಿಯೆಯು ದೇಹದ ಹೊರಗೆ ಹೆಂಡತಿಯ ಅಂಡಾಣುಗಳು ಮತ್ತು ಗಂಡನ ವೀರ್ಯಾಣುಗಳೊಂದಿಗೆ ಪ್ರಯೋಗಾಲಯದಲ್ಲಿ ತಂತ್ರಜ್ಞಾನದ ಮೂಲಕ ಫಲವತ್ತಾಗಿಸಿ ನಂತರ ಭ್ರೂಣವನ್ನು ಮಹಿಳೆಯ ಗರ್ಭದೊಳಗೆ ಹಾಕುವುದನ್ನು ಒಳಗೊಂಡಿರುತ್ತದೆ. ಫೆಬ್ರವರಿ 18, 1999 ರಂದು ಮೊದಲ ಐವಿಎಫ್ ಮಗುವಿನ ಜನನದೊಂದಿಗೆ ಅದರ ಮೊದಲ ಯಶಸ್ಸನ್ನು ಕಂಡಿತು. ಅನುಭವಿ ವೈದ್ಯರು ಮತ್ತು ತರಬೇತಿ ಪಡೆದ ವಿಜ್ಞಾನಿಗಳಿಂದ ಬೆಂಬಲಿತವಾದ ಕೇಂದ್ರವು ಫಲವತ್ತಾದ ದಂಪತಿಗಳಿಗೆ ಸಮಗ್ರ ಶ್ರೇಣಿಯ ಚಿಕಿತ್ಸಾ ಕಾರ್ಯಕ್ರಮಗಳನ್ನು ನೀಡುತ್ತದೆ ಎಂದು ಡಾ. ಪ್ರತಾಪ್ ಒತ್ತಿ ಹೇಳಿದರು. ಸಂತಾನಹೀನತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅತ್ಯಾಧುನಿಕ ತಾಂತ್ರಿಕ ಪ್ರಗತಿಯೊಂದಿಗೆ ಮಾರ್ಕ್ ಕೇಂದ್ರವು ಭಾರತದ ಅತ್ಯಂತ ಮುಂದುವರಿದ ಬಂಜೆತನ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು, ಭ್ರೂಣಶಾಸ್ತ್ರಜ್ಞ ಡಾ.ಸತೀಶ್ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಪೋಷಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ.23: (ನಾಳೆ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಡುಪಿಗೆ

ಉಡುಪಿ, ಜ.22: ಕರ್ನಾಟಕ ಸರಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು...

ಪೆರ್ಡೂರು: ಕೊರಗ ಸಮುದಾಯದ ಕಾಲನಿಗೆ ಶಾಸಕರ ಭೇಟಿ

ಪೆರ್ಡೂರು, ಜ.22: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಡಿ ಕೊರಗರ ಕಾಲೋನಿಗೆ...

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...
error: Content is protected !!