Friday, September 20, 2024
Friday, September 20, 2024

ರಾಜಾಂಗಣದಲ್ಲಿ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್​ ಮಾಯಾಲೋಕ

ರಾಜಾಂಗಣದಲ್ಲಿ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್​ ಮಾಯಾಲೋಕ

Date:

ಉಡುಪಿ, ಜ.31: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಂಡಿತು. ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದ ಕುದ್ರೋಳಿಯವರು ನಿರಂತರ ಮೂರು ಗಂಟೆ ರಾಜಾಂಗಣದಲ್ಲಿ ಮಾಯಾಲೋಕವನ್ನೇ ನಿರ್ಮಿಸಿದ್ದರು. 2000ಕ್ಕೂ ಮಿಕ್ಕಿ ಸೇರಿದ್ದ ಪೇಕ್ಷಕರು ಗಣೇಶ್ ರವರ ಚಾಕಚಕ್ಯತೆಯನ್ನು ಮನಸಾರೆ ಕೊಂಡಾಡಿದರು.

ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿಯಾದ ತುಳುನಾಡಿನ ಭೂತಾರಾಧನೆಯ ಅಂಶವನ್ನು ಒಳಗೊಂಡ ಯಕ್ಷಿಣಿ, ಸುಪ್ತ ಮನಸ್ಸಿನ ಚಮತ್ಕಾರ, ನವರಸಪೂರ್ಣ ಜಾದೂ, ಸಮಕಾಲೀನ ಮತ್ತು ಆಧುನಿಕ ಮ್ಯಾಜಿಕ್ ಇಲ್ಯೂಷನ್ ಸಂಗಮದ ಕಾರ್ಯಕ್ರಮ ಪುತ್ತಿಗೆ ಪರ್ಯಾಯಕ್ಕಾಗಿ ವಿಶೇಷವಾಗಿ ಸಿದ್ದಪಡಿಸಲಾಗಿತ್ತು. ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೂಡಾ ತಮ್ಮ ಶಿಷ್ಯರೊಂದಿಗೆ ಕುದ್ರೋಳಿಯವರು ನಿರ್ಮಿಸಿದ ಮಾಯಾ ಜಗತ್ತನ್ನು ನೋಡಿ ಆನಂದಪಟ್ಟರು.

ಸ್ವತಃ ವೇದಿಕೆಗೆ ತೆರಳಿ ಗಣೇಶ್ ಕುದ್ರೋಳಿಯವರ ಸಹಕಾರದಿಂದ ಜಾದೂ ಮಾಡಿ, ಕನ್ನಡಿಯ ಒಳಗೆ ರಾಮಲಲ್ಲನ ಚಿತ್ರವನ್ನು​ ಶೂನ್ಯದಿಂದ ಸೃಷ್ಟಿಸಿದರು. ನೆರೆದಿದ್ದ ಜನಸ್ತೋಮ ಮುಗಿಲು ಮುಟ್ಟಿದ ಜೈಶ್ರೀರಾಮ್ ಘೋಷಣೆ. ಬಳಿಕ ಸ್ವಾಮೀಜಿಗಳು ಮಾತನಾಡಿ ಗಣೇಶ್ ರವರ ಇಂದ್ರಜಾಲ ನೋಡುಗರ ಮನಸ್ಸಿಗೆ ಸಂತಸ ನೀಡಿದೆ. ವಿದೇಶದಲ್ಲಿರುವ ನಮ್ಮ 14ಶಾಖಾ ಮಠಗಳಲ್ಲಿ ಜಾದೂ ಕಾರ್ಯಕ್ರಮವನ್ನು ನೀಡಲು ಆಮಂತ್ರಣ ನೀಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!