ಕಾಪು, ಜ.28: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ದೇಶವ್ಯಾಪಿ ಪಸರಿಸುವ ನಿಟ್ಟಿನಲ್ಲಿ ಆಯೋಜನೆಗೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕಾಪು ಕ್ಷೇತ್ರದಲ್ಲಿ ಸಂಚರಿಸಿ ಎಲ್ಲೂರು ಗ್ರಾಮದಲ್ಲಿ ಸಮಾರೋಪಗೊಂಡಿತು. ಶಾಸಕ ಸುರೇಶ್ ಶೆಟ್ಟಿ ಗುರ್ಮೆ ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮನ್ನು ಉದ್ಘಾಟಿಸಿದರು. ಮುದ್ರಾ ಯೋಜನೆಯಡಿಯಲ್ಲಿ ಮಂಜೂರಾದ ಸಾಲ ಸೌಲಭ್ಯದ ಆದೇಶ ಪತ್ರ ಹಾಗೂ ಆಯುಷ್ಮಾನ್ ಕಾರ್ಡ್ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಮಂಜೂರಾದ ಉಚಿತ ಗ್ಯಾಸ್ ಸಂಪರ್ಕಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿರಾಜ್ ರಾವ್, ಉಪಾಧ್ಯಕ್ಷರಾದ ಉಷಾ, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಜಿಲ್ಲಾ ಪ್ರಭಾರಿಗಳಾದ ಶೊಯ್ಯಬ್ ಅಹಮ್ಮದ್ ಕಲಾಲ್, ನಬಾರ್ಡ್ ನ ಸಂಗೀತಾ ಕರ್ತ, ಲೀಡ್ ಬ್ಯಾಂಕ್ ಪ್ರಬಂಧಕರಾದ ಬೀರ್ ಸಾಬ್ ಪಿಂಜಾರ, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ನೋಡಲ್ ಅಧಿಕಾರಿಗಳಾದ ಸಚಿನ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಧನಂಜಯ್, ಕೃಷಿ ಇಲಾಖೆಯ ವೆಂಕಟೇಶ್, ರುಡ್ ಸೆಟ್ ಸಂಸ್ಥೆಯ ಕರುಣಾಕರ್ ಜೈನ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.