Friday, November 1, 2024
Friday, November 1, 2024

ಜ್ಞಾನಭಾರತ್: ವೈಭವದ ಶ್ರೀರಾಮೋತ್ಸವ

ಜ್ಞಾನಭಾರತ್: ವೈಭವದ ಶ್ರೀರಾಮೋತ್ಸವ

Date:

ಕಾರ್ಕಳ, ಜ.23: ಪುಣ್ಯಭೂಮಿ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಜ್ಞಾನಭಾರತ್ – ಬಾಲಸಂಸ್ಕಾರ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಶ್ರೀರಾಮೋತ್ಸವ ವಿಜೃಂಭಣೆಯಿಂದ ಜ್ಞಾನಸುಧಾ ಆವರಣದಲ್ಲಿ ನಡೆಯಿತು. ಅಯೋಧ್ಯೆಯ ಕರಸೇವೆಯಲ್ಲಿ ಕಾರ್ಕಳವನ್ನು ಪ್ರತಿನಿಧಿಸಿದ್ದ ನಾರಾಯಣ ಮಣಿಯಾಣಿಯವರನ್ನು ಟ್ರಸ್ಟಿನ ವತಿಯಿಂದ, ಸಮಸ್ತ ಕರಸೇವಕರ ಪರವಾಗಿ ಗೌರವಿಸಲಾಯಿತು. ಇತ್ತೀಚೆಗೆ ತೆಂಗಿನ ಮರದಿಂದ ಬಿದ್ದು ನಡೆದಾಡುವ ಸಾಮರ್ಥ್ಯ ಕಳೆದುಕೊಂಡ ಉದಯ್ ಸಾಣೂರು, ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜೋಡುಕಟ್ಟೆಯ ಸುಧೀರ್ ಆಚಾರ್ಯ ಹಾಗೂ ಕಿಡ್ನಿ ವೈಫಲ್ಯಕ್ಕೊಳಗಾದ ನಿಟ್ಟೆಯ ಪ್ರವೀಣ್ ಕುಮಾರ್‌ರವರಿಗೆ ತಲಾ 10 ಸಾವಿರದಂತೆ ಒಟ್ಟು 30 ಸಾವಿರ ರೂಪಾಯಿಗಳ ಧನಸಹಾಯವನ್ನು ನೀಡಲಾಯಿತು. ಜ್ಞಾನಭಾರತ್ ಆಯೋಜಿಸಿದ ಕಾರ್ಕಳ-ಹೆಬ್ರಿ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ನೀಡಲಾಯಿತು ಹಾಗೂ ಬಾಲಸಂಸ್ಕಾರದ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೂ ಬಹುಮಾನ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭ ಗಾಯಕ ಸಚಿತ್ ಪೂಜಾರಿ ನಂದಳಿಕೆ ಇವರಿಂದ ‘ಭಕ್ತಿಸುಧೆ’, ‘ಜ್ಞಾನಭಾರತ್ ವೃಂದ’ ಬಾಲಸಂಸ್ಕಾರ ವಿದ್ಯಾರ್ಥಿಗಳಿಂದ ‘ಶ್ರವಣಕುಮಾರ’ ಕಿರು ಪ್ರಹಸನ ಹಾಗೂ ‘ಶ್ರೀರಾಮಚಂದ್ರ ಪುರಪ್ರವೇಶ’ ದೃಶ್ಯರೂಪಕವನ್ನು ಪ್ರಸ್ತುತ ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ವಿದ್ಯಾವತಿ ಎಸ್ ಶೆಟ್ಟಿ, ಜ್ಞಾನಭಾರತ್ ವೃಂದದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರ್, ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಸಾಹಿತ್ಯ, ಜ್ಞಾನಭಾರತ್‌ನ ಉಪಾಧ್ಯಕ್ಷರಾದ ದಯಾನಂದ ಬಾಯಾರಿ, ಸಂಚಾಲಕರಾದ ಸುಮಿತ್ ಉಪಸ್ಥಿತರಿದ್ದರು. ವೃಂದದ ಕಾರ್ಯದರ್ಶಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಡಿಯಲ್ಲಿ ಒಂದಿಂಚು ಭೂಮಿಗೂ ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ನರೇಂದ್ರ ಮೋದಿ

ಕಚ್, ಅ.31: ಇಂದು ದೇಶವು ಗಡಿಯಲ್ಲಿ ಒಂದು ಇಂಚು ಭೂಮಿಗೂ ರಾಜಿ...

ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಪನ್ನ

ಉಡುಪಿ, ಅ.31: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಹಾಗೂ ಉಡುಪಿ...

ಪುನೀತ್ ರಾಜಕುಮಾರ್‌ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸೀತಾರಾಮ ಆಚಾರ್

ಕೋಟ, ಅ.31: ಬದುಕಿನ ಆಯಾಮದಲ್ಲಿ ಪುನೀತ್ ರಾಜಕುಮಾರ್ ರಂತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು...

ಆನಂದ ಸಿ ಕುಂದರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕೋಟ, ಅ.31: ಸ.ಹಿ.ಪ್ರಾ ಶಾಲೆ ಮಣೂರು ಪಡುಕರೆ ಇಲ್ಲಿ ಶಾಲಾ ಸಮುದಾಯದತ್ತ...
error: Content is protected !!