ಕಾರ್ಕಳ, ಜ.15: ಜ್ಞಾನಭಾರತ್ ವೃಂದ ಗಣಿತನಗರವು ಪುಣ್ಯ ಭೂಮಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜನವರಿ 22 ರಂದು ನಡೆಯುವ ಐತಿಹಾಸಿಕ ಶ್ರೀರಾಮನ ದಿವ್ಯಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಕಾರ್ಕಳ-ಹೆಬ್ರಿ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಜನವರಿ 21 ರವಿವಾರದಂದು ಗಣಿತನಗರದ ಜ್ಞಾನಸುಧಾ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಗೂಗಲ್ ಫಾರ್ಮೆಟ್ https://forms.gle/yoLTUXgpq4QRo55m8 ಮೂಲಕ ತಮ್ಮ ಹೆಸರನ್ನು ಈ ತಿಂಗಳ 18 ನೇ ತಾರೀಕಿನೊಳಗೆ ನೊಂದಾಯಿಸಿಕೊಳ್ಳತಕ್ಕದ್ದು. ಸ್ಪರ್ಧೆ ನಡೆಯುವ ದಿನ ವಿದ್ಯಾರ್ಥಿಯು ಶಾಲಾಗುರುತಿನ ಚೀಟಿಯನ್ನು ತರುವುದು ಕಡ್ಡಾಯವಾಗಿರುತ್ತದೆ. ಸ್ಪರ್ಧಿಯು ಸ್ಪರ್ಧೆ ನಡೆಯುವ ಸ್ಥಳದಲ್ಲಿ 30 ನಿಮಿಷದ ಮೊದಲು ಹಾಜರಿರತಕ್ಕದ್ದು. ಸ್ಪರ್ಧೆಯು 10 ಗಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಲಿದೆ. ಸ್ಪರ್ಧಿಗಳಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ ಇರುತ್ತದೆ. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ಪರ್ಧೆಯ ವಿವರ: ಛದ್ಮವೇಷ ಸ್ಪರ್ಧೆ ವಿಭಾಗ: 6ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ. ಅವಧಿ: 2 ನಿಮಿಷ, ವಿಷಯ: ರಾಮಾಯಣದ ಯಾವುದಾದರು ಒಂದು ಪಾತ್ರ. ವರ್ಗ: ಏಕವ್ಯಕ್ತಿ. ಚಿತ್ರ ಕಲಾ ಸ್ಪರ್ಧೆ: ಕಲರ್ ಪೈಂಟಿಂಗ್ ವಿಭಾಗ: 8ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ. ವಿಷಯ: ರಾಮಾಯಣದ ಯಾವುದಾದರು ಒಂದು ಸನ್ನಿವೇಶ, ಅವಧಿ: 2 ಗಂಟೆ ವಿ.ಸೂ: ಚಿತ್ರ ಬಿಡಿಸಲು ಎ3 ಡ್ರಾಯಿಂಗ್ ಶೀಟ್ ಗಳನ್ನು ಸ್ಥಳದಲ್ಲಿಯೇ ನೀಡಲಾಗುವುದು. ವರ್ಗ: ಏಕವ್ಯಕ್ತಿ. ರಸಪ್ರಶ್ನೆ ಸ್ಪರ್ಧೆ ವಿಭಾಗ: ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿಷಯ: ರಾಮಾಯಣ, ವರ್ಗ: ಎರಡು ವಿದ್ಯಾರ್ಥಿಗಳ ಒಂದು ತಂಡ (ಲಿಖಿತ ಪರೀಕ್ಷೆಯ ಅನಂತರ ಅಗ್ರ 6 ತಂಡಗಳನ್ನು ಆಯ್ಕೆ ಮಾಡಿ ಅಂತಿಮ ಸ್ಪರ್ಧೆ ನಡೆಯಲಿದೆ).
ವಿಭಾಗವಾರು ಬಹುಮಾನದ ವಿವರ: ಪ್ರಥಮ : ರೂ. 3000/- ಮತ್ತು ಪ್ರಶಸ್ತಿ ಪತ್ರ, ದ್ವಿತೀಯ: ರೂ.2000/-ಮತ್ತು ಪ್ರಶಸ್ತಿ ಪತ್ರ, ತೃತೀಯ : ರೂ.1000/-ಮತ್ತು ಪ್ರಶಸ್ತಿ ಪತ್ರ. ಹೆಚ್ಚಿನ ಮಾಹಿತಿಗಾಗಿ 9611875798, 8105764158 ಸಂಪರ್ಕಿಸಿ