ಅಂಬಲಪಾಡಿ, ಜ.14: ಉಡುಪಿ ರೋಟರಿ ಪ್ರಾಯೋಜಕತ್ವದಲ್ಲಿ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ, ದೇವಳದ ಭವಾನಿ ಮಂಟಪದಲ್ಲಿ ವಲಯ 4ರ ಇಂಟರಾಕ್ಟ ಸದಸ್ಯರಿಗಾಗಿ ಬೌದ್ಧಿಕ ವಿಕಸನ ಕಾರ್ಯಾಗಾರ ನಡೆಯಿತು. ಧರ್ಮದರ್ಶಿ ಡಾ. ವಿಜಯ ಬಲ್ಲಾಳರು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ತಮ್ಮ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಉತ್ತಮ ಜೀವನ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ, ರೋಟರಿ ಉಡುಪಿ ಮಕ್ಕಳಿಗಾಗಿ ಆಯೋಜಿಸುತ್ತಿರುವ ಬೌದ್ಧಿಕ ವಿಕಸನ ಕಾರ್ಯಾಗಾರ ಶ್ಲಾಘನೀಯ ಎಂದು ಹೇಳುತ್ತಾ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಮಕ್ಕಳಿಗೆ ಕರೆಯಿತ್ತರು. ಸ್ವಾಮಿ ವಿವೇಕಾನಂದರು ಹೇಳಿದಂತೆ ವಿದ್ಯಾರ್ಥಿಗಳು ಗುರಿಮುಟ್ಟುವ ತನಕ ಬಿಡದೆ ತಮ್ಮ ಪ್ರಯತ್ನ ಮಾಡಿ ಯಶಸ್ಸುಗಳಿಸಬೇಕೆಂದರು.
ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಂದ ಪ್ರಾರ್ಥನೆಯ ಬಳಿಕ ಅದ್ಯಕ್ಷೆ ದೀಪಾ ಭಂಡಾರಿಯವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಅನಂತರಾಮ ಬಲ್ಲಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಜಿಲ್ಲಾ ಇಂಟರಾಕ್ಟ ಉಪಸಭಾಪತಿ ಜನಾರ್ದನ ಭಟ್ ಶುಭ ಹಾರೈಸಿದರು. ಕ್ಲಬ್ ಯುವಸೇವಾ ನಿರ್ದೇಶಕ ಹೇಮಂತಕಾಂತ, ಇಂಟರಾಕ್ಟ ನಿರ್ದೇಶಕ ಗುರುರಾಜ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶುಭ ಬಾಸ್ರಿ ವಂದಿಸಿದರು. ಗೋಪಾಲಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್, ಮಣಿಪಾಲ ಪರ್ಪಲ್ ಪರ್ಲ ಮಕ್ಕಳ ಗ್ರಂಥಾಲಯದ ಮಾಲಕಿ ಪಲ್ಲವಿ ಬೆಹರ, ಪ್ರಭಾಕರ ಮಿತ್ಯಂತ, ಡಾ. ಶ್ರೀದರ ಬಾಯರಿ, ಯೋಗನರಸಿಂಹಸ್ವಾಮಿ ವಿವಿದ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.