Saturday, October 19, 2024
Saturday, October 19, 2024

ಪುತ್ತಿಗೆ ಪರ್ಯಾಯ: ಪುರಪ್ರವೇಶ ಪೂರ್ವಭಾವಿ ಸಭೆ

ಪುತ್ತಿಗೆ ಪರ್ಯಾಯ: ಪುರಪ್ರವೇಶ ಪೂರ್ವಭಾವಿ ಸಭೆ

Date:

ಉಡುಪಿ, ಜ. 7: ಜನವರಿ 8 ರಂದು ಪುತ್ತಿಗೆ ಶ್ರೀಪಾದರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಭಾರತದ ತೀರ್ಥಕ್ಷೇತ್ರ ಸಂಚಾರಗೈದು ಉಡುಪಿ ಕ್ಷೇತ್ರಕ್ಕೆ ಪುರಪ್ರವೇಶಗೈಯಲ್ಲಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಎಚ್.ಎಸ್ ಬಲ್ಲಾಳ್ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು. ಪುರಪ್ರವೇಶ ಮೆರವಣಿಗೆಯು ಜೋಡುಕಟ್ಟೆಯಿಂದ ಕೆಎಂ ಮಾರ್ಗವಾಗಿ ತ್ರಿವೇಣಿ ವೃತ್ತದಲ್ಲಿ ತಿರುಗಿ ಕನಕದಾಸ ರಸ್ತೆಯ ಮೂಲಕ ಉಡುಪಿ ರಥಬೀದಿಯನ್ನು ತಲುಪಲಿದ್ದು ಈ ಮೆರವಣಿಗೆಯಲ್ಲಿ ವಿವಿಧ ಸಮಾಜದ ಸಂಘಟನೆಗಳ ಪಾಲ್ಗೊಳ್ಳುವಿಕೆಯು ಇರುತ್ತದೆ. ಸಾಂಪ್ರದಾಯಿಕ ಟ್ಯಾಬ್ಲೊ ವೇದಘೋಷ, ಭಜನೆ ಗಣ್ಯಮಾನ್ಯರ ಉಪಸ್ಥಿತಿಯೊಂದಿಗೆ ಭಾವಿ ಪರ್ಯಾಯ ಪುತ್ತಿಗೆ ಮಠದ ಸಂಸ್ಥಾನ ಮೂರ್ತಿ ಉಪೇಂದ್ರ ವಿಠಲ ದೇವರ ಮೆರವಣಿಗೆಯು ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ಸಮಿತಿಯ ಕಾರ್ಯಾಧ್ಯಕ್ಷರಾದ ಮಾಜಿ ಶಾಸಕ ರಘುಪತಿ ಭಟ್ ಮೆರವಣಿಗೆಯ ಬಗ್ಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಭಾವಿ ಪರ್ಯಾಯ ಶ್ರೀಪಾದರಿಗೆ ನಡೆಯುವ ಅಭಿನಂದನಾ ಕಾರ್ಯಕ್ರಮದ ಕುರಿತು ತಿಳಿಸುತ್ತಾ, ಸ್ವಾಗತ ಸಮಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ಪೌರಾಭಿನಂದನೆ ಕಾರ್ಯಕ್ರಮ ಶ್ರೀಪಾದರಿಗೆ ನಡೆಯಲಿದೆ ಎಂದು ತಿಳಿಸಿದರು.

ಶ್ರೀಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಕರ್ನಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ್, ಕೋಶಾಧಿಕಾರಿ ರಂಜನ್ ಕಲ್ಕೂರ, ಸಂಚಾಲಕ ಮಟ್ಟಾರು ರತ್ನಾಕರ ಹೆಗ್ಡೆ, ದಿನೇಶ್ ಪುತ್ರನ್, ಹೊರೆಕಾಣಿಕೆ ಸಮಿತಿಯ ಬೈಕಾಡಿ ಸುಪ್ರಸಾದ ಶೆಟ್ಟಿ, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಶ್ರೀಪಾದರ ಸಾಗರೋತ್ತರ ಕಾರ್ಯದರ್ಶಿ ಎಂ ಪ್ರಸನ್ನಾಚಾರ್ಯ ವಂದಿಸಿದರು. ಸಂಚಾಲಕ ರಮೇಶ್ ಭಟ್ ಕೆ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!