ಬೆಳ್ಮಣ್, ಡಿ.24: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ಆಯ್ಕೆಗಳಿದ್ದು, ಯಾವುದೇ ಗೊಂದಲಕ್ಕೊಳಗಾಗದೆ ನಮಗೆ ಯೋಗ್ಯ ಮಾರ್ಗ ಆಯ್ಕೆಮಾಡಿಕೊಂಡು, ಅದರಲ್ಲಿ ಶೃದ್ಧೆಯಿಂದ ಪರಿಶ್ರಮ ಪಟ್ಟರೆ ಜೀವನದಲ್ಲಿ ಮುಂದೆ ಬರಬಹುದು ಎಂದು ಯೂಟ್ಯೂಬ್ ಚಾನೆಲ್‌ನ ಸಹಸ್ಥಾಪಕ, ಕೊಂಕಣಿ ಹಾಸ್ಯ ಚಲನಚಿತ್ರ ‘ಲಕ್ಕಿ ಡ್ರಾ 777’ನ ಟ್ರೆಂಡಿಂಗ್ ಶೀಲ್ಡ್ ಟಿವಿ ನಿರ್ಮಾಪಕ ರಾಯನ್ ಫೆರ್ನಾಂಡಿಸ್ ಹೇಳಿದರು. ಮುಲ್ಲಡ್ಕ ಡಾನ್ ಬೋಸ್ಕೋ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಫಾ. ಅರವಿಂದ್ ಸೆವೆರೆಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದ್ರೆಯ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ವಿಭಾಗದ ಸಹ ಪ್ರಾಧ್ಯಾಪಕ ಪ್ರದೀಪ್ ನಜ್ಹರತ್, ಮುಲ್ಲಡ್ಕ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಎಲ್ಸಿ ಡಿಮೆಲ್ಲೋ, ಪಾಂಬೂರ್ ಚರ್ಚ್ ಹೈಯರ್ ಪ್ರೈಮರಿ ಸ್ಕೂಲ್‌ನ ಮಾಜಿ ಮುಖ್ಯೋಪಾಧ್ಯಾಯ ಹೆರಾಲ್ಡ್ ಡಿಮೆಲ್ಲೋ, ಫಾ. ಜೇಮ್ಸ್, ಫಾ. ವಿಲ್ಲೀಸ್ ಪಿಂಟೋ, ಫಾ. ಲಿಯ್ನಾಡ್ರೋ ಮತ್ತಿತರರು ವೇದಿಕೆಯಲ್ಲಿದ್ದರು. ಫಾ. ಎರ್ನಾಲ್ಡ್ ಮಥಾಯಸ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಫಾ. ಮಿಲ್ಟನ್ ಫೆರ್ನಾಂಡಿಸ್ ವಂದಿಸಿದರು. ವಿದ್ಯಾರ್ಥಿ ರಿಶಾನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.