Thursday, January 23, 2025
Thursday, January 23, 2025

ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನಕ್ಕೆ ಗೋಕರ್ಣ ಪರ್ತಗಾಳಿ ಶ್ರೀಗಳ ಭೇಟಿ

ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನಕ್ಕೆ ಗೋಕರ್ಣ ಪರ್ತಗಾಳಿ ಶ್ರೀಗಳ ಭೇಟಿ

Date:

ಬ್ರಹ್ಮಾವರ, ಡಿ.11: ದಕ್ಷಿಣ ಪಂಢರಾಪುರ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಭೇಟಿ ನೀಡಿದರು. ಶ್ರೀಗಳನ್ನು ಪೂರ್ಣಕುಂಭ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ, ಗುರುಕಾಣಿಕೆ ಸಮರ್ಪಣೆ ಮಾಡಲಾಯಿತು. ಶ್ರೀಗಳು ಭಜನಾ ಮಹೋತ್ಸವದ ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಿದರು. 2024 ರ ಶ್ರೀ ವೀರವಿಠ್ಠಲ ದೇವರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎನ್. ಮಂಜುನಾಥ ಪಿ. ನಾಯಕ್, ಆಡಳಿತ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ವೇದಮೂರ್ತಿ ಗಣಪತಿ ಭಟ್, ಸದಾನಂದ ಆಚಾರ್ಯ, ಜಯದೇವ ಪುರಾಣಿಕ್ ಕಾರ್ಕಳ, ಕೃಷ್ಣಾನಂದ ಶರ್ಮ ಬ್ರಹ್ಮಾವರ, ವಿಶ್ವಸ್ಥ ಮಂಡಳಿಯ ಸದಸ್ಯರಾದ ವಿಠ್ಠಲದಾಸ ಆಚಾರ್ಯ, ಉದ್ಯಮಿ ಶಿರಿಯಾರ ಗಣೇಶ್ ನಾಯಕ್, ಪ್ರಭಾಕರ ಭಟ್, ಗಣೇಶ ಜಿ ಪೈ ಪರ್ಕಳ, ಕೆ.ಸಿ ಪ್ರಭು, ಉದಯ ಪಡಿಯಾರ್ ಸಿ., ಕೃಷ್ಣ ಪೈ, ಭಾಸ್ಕರ ಶೆಣೈ, ಸುರೇಶ ಶೆಣೈ, ಗಿರಿಧರ ರಾವ್, ಸುಧೀರ ಭಟ್, ದಿನೇಶ ಪಡಿಯಾರ್ , ಆಶಾ ಆಚಾರ್ಯ, ಕಿಶೋರಿ ಪೈ, ಭಾಗ್ಯಶ್ರೀ ಭಟ್, ಲತಾ ಆಚಾರ್ಯ, ರಾಧಾ ಗೋಪಾಲಕೃಷ್ಣ, ವೆಂಕಟೇಶ ಶೆಣೈ, ರವಿಚಂದ್ರ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಭದ್ರಗಿರಿ ಶ್ರೀ ವೀರವಿಠ್ಠಲ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಜ.22: ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ...

ರಾಜ್ಯದಲ್ಲಿ ಗೋವುಗಳ ಮೇಲೆ ಆಕ್ರಮಣ- ಜ.25 ರಂದು ಉಪವಾಸಕ್ಕೆ ಪೇಜಾವರ ಶ್ರೀ ಕರೆ

ಉಡುಪಿ, ಜ.22: ರಾಜ್ಯದಲ್ಲಿ ಗೋವುಗಳ ಮೇಲೆ ಸರಣಿ ಹಿಂಸೆಗಳು ನಡೆಯುತ್ತಿದ್ದು ಗೋವುಗಳ...

ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

ಮಣಿಪಾಲ, ಜ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ...

ಮಲ್ಪೆ: ಸಿರಿಧಾನ್ಯ ರೋಡ್ ಶೋ

ಉಡುಪಿ, ಜ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಉಡುಪಿ...
error: Content is protected !!