ಶಂಕರನಾರಾಯಣ, ಡಿ.5: ಸಮೃದ್ಧಿ ಯುವಕ ಮಂಡಲ(ರಿ) ಕುಳ್ಳುಂಜೆ, ಶಂಕರನಾರಾಯಣ ವತಿಯಿಂದ ವಕೀಲರ ದಿನಾಚರಣೆ ಸಮೃದ್ಧಿ ಯುವಕ ಮಂಡಲದ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮೃದ್ಧಿ ಯುವಕ ಮಂಡಲ ಅಧ್ಯಕ್ಷರಾದ ಗಣೇಶ ತಲ್ಲಂಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರದ ವಕೀಲರಾದ ಪ್ರಶಾಂತ ಶೆಟ್ಟಿ ಶಾಡಿಗುಂಡಿ ಆಗಮಿಸಿ ತಮ್ಮ ವೃತ್ತಿಯಲ್ಲಿನ ಅನುಭವವನ್ನು ಹಂಚಿಕೊಂಡರು. ಪ್ರಶಾಂತ ಶೆಟ್ಟಿ ಶಾಡಿಗುಂಡಿ ಸನ್ಮಾನಿಸಿ ಗೌರವಿಲಾಯಿತು. ಮಾಜಿ ಅಧ್ಯಕ್ಷರಾದ ಗೋಪಾಲ ಎಳ್ಮಣ್ಣು, ಕೇಶವ ಮಕ್ಕಿಮನೆ, ಸುಜಿತ್ ಶೇಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಗೀಶ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಪ್ರವೀಣ ಬಾಳೆಕೊಡ್ಲು ವಂದಿಸಿದರು.
ಶಂಕರನಾರಾಯಣ: ವಕೀಲರ ದಿನಾಚರಣೆ

ಶಂಕರನಾರಾಯಣ: ವಕೀಲರ ದಿನಾಚರಣೆ
Date: