Sunday, January 19, 2025
Sunday, January 19, 2025

ಅಂಗನವಾಡಿಯಿಂದ ಸ್ನಾತಕೋತ್ತರ ಪದವಿಯವರೆಗೂ ಸಮಾನತೆ ಸಾರುವ ವಸ್ತ್ರಸಂಹಿತೆ ಜಾರಿಯಾಗಲಿ: ಐರೋಡಿ ವಿಠ್ಠಲ ಪೂಜಾರಿ

ಅಂಗನವಾಡಿಯಿಂದ ಸ್ನಾತಕೋತ್ತರ ಪದವಿಯವರೆಗೂ ಸಮಾನತೆ ಸಾರುವ ವಸ್ತ್ರಸಂಹಿತೆ ಜಾರಿಯಾಗಲಿ: ಐರೋಡಿ ವಿಠ್ಠಲ ಪೂಜಾರಿ

Date:

ಉಡುಪಿ: ಹಿಜಾಬ್ ವಿವಾದ ಪಿ.ಎಫ್.ಐ., ಸಿ.ಎಫ್.ಐ., ಎಸ್.ಡಿ.ಪಿ.ಐ ಹಾಗೂ ಮತೀಯವಾದದ ಮೂಲಕ ಶಾಂತಿ ಕದಡುವ ರಾಜಕೀಯ ಶಕ್ತಿಗಳ ಸಂಘಟನೆಯ ಹಿಡನ್ ಅಜೆಂಡಾ ಎಂದು ಬಿಜೆಪಿ ಹಿಂ.ವ.ಮೋರ್ಚಾ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಹೇಳಿದ್ದಾರೆ. ಈ ಹಿಜಾಬ್ ವಿವಾದದ ಮೂಲಕ ಕರಾವಳಿ ಪ್ರದೇಶ ಸೇರಿ ರಾಜ್ಯ,ದೇಶದಾದ್ಯಂತ ಕೋಮು ಸಂಘರ್ಷ ಸೃಷ್ಟಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದು ಜನಜೀವನವನ್ನು ಅಸ್ತವ್ಯಸ್ತ ಮಾಡಿ ಖುಷಿ ಪಡುವ ಇರಾದೆಯಲ್ಲಿ ಮತಾಂಧ ಶಕ್ತಿಗಳು ಕೆಲಸ ಮಾಡುತ್ತಿವೆ. ಭಾರತೀಯ ಜನತಾ ಪಾರ್ಟಿಯು ಈ ನೆಲದ ಕಾನೂನಿಗೆ ಧಕ್ಕೆ ತರುವವರಿಗೆ ಈ ರೀತಿಯ ಕನಸು ಕಾಣಲು ಬಿಡುವುದಿಲ್ಲ.

ಸರ್ಕಾರ ಆದಷ್ಟು ಬೇಗ ಈ ಮತೀಯವಾದದ ಮೂಲಕ ಶಾಂತಿ ಕದಡುವ ಸಂಘಟನೆಯನ್ನು ನಿಷೇಧಿಸಿ ಅಂಗನವಾಡಿಯಿಂದ ಸ್ನಾತಕೋತ್ತರ ಪದವಿವರೆಗೂ ಸಮಾನತೆ ಸಾರುವ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ಐರೋಡಿ ವಿಠ್ಠಲ ಪೂಜಾರಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!