ಕಾರ್ಕಳ, ಡಿ.4: ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಹಾಗೂ ಕೈಗಾರಿಕಾ ಭೇಟಿ ಉಪಪ್ರಾಂಶುಪಾಲರಾದ ಸಾಹಿತ್ಯ ಇವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು. ಕಾರ್ಕಳ ಸಮೀಪದ ಮಿಯಾರಿನ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಇನ್ಸ್ಟಿಟ್ಯೂಟ್ ಫಾರ್ ಆರ್ಟಿಸನ್ಸ್ ಮತ್ತು ಬನ್ನಡ್ಕದಲ್ಲಿರುವ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿ.ಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ತರಬೇತಿ, ಉತ್ಪನ್ನ, ಮಾರುಕಟ್ಟೆ ವ್ಯವಸ್ಥೆಯ ಕುರಿತಂತೆ ಮಾಹಿತಿ ಪಡೆದುಕೊಂಡರು. ಎಸ್.ಕೆ.ಎಫ್.ನ ಸಂಸ್ಥಾಪಕ ಡಾ. ಜಿ.ರಾಮಕೃಷ್ಣ ಆಚಾರ್, ಸಂಸ್ಥೆಯ ಎಚ್.ಆರ್ ಸುಮನಾ ಹಾಗೂ ಸಿ.ಇ.ಕಾಮತ್ ಇನ್ಸ್ಟಿಟ್ಯೂಟ್ ಫಾರ್ ಆರ್ಟಿಸನ್ಸ್ ಇದರ ನಿರ್ದೇಶಕಿ ಸವಿತಾ
ಎಸ್.ನಾಯಕ್ ಮತ್ತು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಸಂಗೀತಾ ಕುಲಾಲ್, ಅರ್ಥಶಾಸ್ತ್ರ ಉಪನ್ಯಾಸಕ ಸುಮಿತ್ರಾ, ಸಂಖ್ಯಾಶಾಸ್ತ್ರ ಉಪನ್ಯಾಸಕ ಲೆ.ಮಂಜುನಾಥ್ ಮುದೂರು ಉಪಸ್ಥಿತರಿದ್ದರು.
ಜ್ಞಾನಸುಧಾ ವಿದ್ಯಾರ್ಥಿಗಳ ಅಧ್ಯಯನ ಭೇಟಿ
ಜ್ಞಾನಸುಧಾ ವಿದ್ಯಾರ್ಥಿಗಳ ಅಧ್ಯಯನ ಭೇಟಿ
Date: