Wednesday, January 22, 2025
Wednesday, January 22, 2025

ನ. 29: ಜೀವರಕ್ಷಕ ತರಬೇತಿಯ ಆಯ್ಕೆ ಪ್ರಕ್ರಿಯೆ

ನ. 29: ಜೀವರಕ್ಷಕ ತರಬೇತಿಯ ಆಯ್ಕೆ ಪ್ರಕ್ರಿಯೆ

Date:

ಉಡುಪಿ, ನ.24: ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಬೀಚ್, ಆಸರೆ ಬೀಚ್, ಮಲ್ಪೆ ಬೀಚ್, ಕಾಪು ಬೀಚ್ ಹಾಗೂ ಪಡುಬಿದ್ರಿ ಮುಖ್ಯ ಬೀಚ್‌ಗಳಲ್ಲಿ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆಯ ವತಿಯಿಂದ 20 ಜನರಿಗೆ ಜೀವ ರಕ್ಷಕ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮುಂಚಿತವಾಗಿ ನವೆಂಬರ್ 29 ರಂದು ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು. ಆಸಕ್ತ ಕನಿಷ್ಟ 18 ರಿಂದ 45 ವರ್ಷದೊಳಗಿನ, ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, 1 ಕಿ.ಮೀ ಓಟ ಮತ್ತು 400 ಮೀ ಈಜಲು ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳು ತಮ್ಮ ಬಯೋಡಾಟಾದೊಂದಿಗೆ ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಹಾಜರಾಗಿ ನೊಂದಾಯಿಸಿಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ 303, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574868 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ.23: (ನಾಳೆ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಡುಪಿಗೆ

ಉಡುಪಿ, ಜ.22: ಕರ್ನಾಟಕ ಸರಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು...

ಪೆರ್ಡೂರು: ಕೊರಗ ಸಮುದಾಯದ ಕಾಲನಿಗೆ ಶಾಸಕರ ಭೇಟಿ

ಪೆರ್ಡೂರು, ಜ.22: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಡಿ ಕೊರಗರ ಕಾಲೋನಿಗೆ...

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...
error: Content is protected !!