ಉಡುಪಿ, ನ. 19: ಸಹಕಾರ ಪದವೇ ನಮ್ಮೆಲ್ಲರ ಬದುಕಿನಲ್ಲಿ ಜನಜನಿತವಾಗಿ ಹುಟ್ಟಿಕೊಂಡು ಬಂದಿರುವ ಪದ. ಮಾನವೀಯತೆಯ ಆಧಾರದಲ್ಲಿ ನಿಂತಿರುವ ಸಹಕಾರ ತತ್ವ, ಸಂಘ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕಾರ್ಯವೆಸಗಬೇಕಾದರೆ ಪ್ರಾಮಾಣಿಕತೆ, ಪಾರದರ್ಶಕತೆ, ಸಮಾನತೆಯ ತತ್ವಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಸಹಕಾರಿ ವ್ಯವಸ್ಥೆ ಜನಸಾಮಾನ್ಯರ ಬದುಕಿಗೆ ಹತ್ತಿರವಾಗಲು ಸಾಧ್ಯ. ಸಹಕಾರದ ಮೊದಲ ಆದ್ಯತೆಯೇ ಹಸಿವು ಮುಕ್ತ ಸಾಮಾಜ ನಿರ್ಮಾಣ ಸಾಧ್ಯವೆಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ
ಸುರೇಂದ್ರನಾಥ ಶೆಟ್ಟಿ ಹೇಳಿದರು.
ರಾಷ್ಟ್ರೀಯ ಸಹಕಾರ ಸಪ್ತಾಹದ ಅಂಗವಾಗಿ ಉಡುಪಿಯ ಬಡುಗಬೆಟ್ಟು ಕ್ರೆಡಿಟ್ ಕೇೂ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಚಿತ್ವ ನೈರ್ಮಲ್ಯ ಆರೇೂಗ್ಯ ಸಹಕಾರಿ ಬದುಕಿನ ಅವಿಭಾಜ್ಯ ಅಂಗವಾಗಬೇಕೆಂದು ಹೇಳಿದರು. ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅರುಣಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ, ಮನೇೂಜ್ ಕರ್ಕೇರ, ರವಿರಾಜ್ ಹೆಗ್ಡೆ, ಕಟಪಾಡಿ ಶಂಕರ ಪುಾಜಾರಿ, ಉಡುಪಿ ಇಂಡಸ್ಟ್ರಿಯಲ್ ಸೊಸೈಟಿ ಉಪಾಧ್ಯಕ್ಷ ಗಣೇಶ್ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಇಂಡಸ್ಟ್ರಿಯಲ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಗ್ಡೆ ಸ್ವಾಗತಿಸಿ, ಪ್ರವೀಣ್ ರಮೇಶ್ ನಿರೂಪಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಹಾಲಪ್ಪ ಕೇೂಡಿಹಳ್ಳಿ ವಂದಿಸಿದರು.