Sunday, January 19, 2025
Sunday, January 19, 2025

ನ.1: (ನಾಳೆ) ಅದಿತಿ ಗ್ಯಾಲರಿಯಲ್ಲಿ ‘ವಸಂತ ಕಲಾ’ ಚಿತ್ರಕಲಾ ಪ್ರದರ್ಶನ

ನ.1: (ನಾಳೆ) ಅದಿತಿ ಗ್ಯಾಲರಿಯಲ್ಲಿ ‘ವಸಂತ ಕಲಾ’ ಚಿತ್ರಕಲಾ ಪ್ರದರ್ಶನ

Date:

ಉಡುಪಿ, ಅ.31: ಬದುಕೆಂಬುದನ್ನು ಕಲೆಯಾಗಿ ತಿಳಿದು, ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ (1960-2022) ಅವರು ಕಾಲೇಜು ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯ್ಯಾಡಿಸಿದರು. ಖ್ಯಾತ ಸಂಗೀತ ಕಲಾವಿದೆ ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (2013) ವಸಂತಲಕ್ಷ್ಮೀ ಯವರು ದುಃಖದ ಮಡುವಿನಿಂದ ಮರೆಯಾಗಲು ಸಾಧನವಾಗಿ ಆಯ್ದುಕೊಂಡದ್ದು ಚಿತ್ರಕಲೆ. ಆಯಿಲ್, ಅಕ್ರಿಲಿಕ್, ಪೆನ್ಸಿಲ್ ಡ್ರಾಯಿಂಗ್ ಮಾಧ್ಯಮಗಳನ್ನು ಬ್ರಷ್- ನೈಫ್ – ಸ್ಕ್ಯಾಲ್ಪೆಲ್ ಸಾಧನಗಳನ್ನು ಬಳಸಿ ಪೋರ್ಟ್ರೇಟ್, ಲ್ಯಾಂಡ್ ಸ್ಕೇಪ್, ಸ್ಥಿರ ಚಿತ್ರ, ಅಮೂರ್ತ ಶೈಲಿಯ ಹಲವಾರು ಕೃತಿಗಳನ್ನು ತನ್ನಷ್ಟಕ್ಕೆ ತಾನೇ ಹೆಣೆಯುತ್ತಾ ಬಂದರು.

ಉಡುಪಿಯ ದೃಶ್ಯ ಕಲಾ ಶಾಲೆಯ ಹಿರಿಯ ಶಿಕ್ಷಕ ರಮೇಶ ರಾಯರಲ್ಲಿ ಮಾರ್ಗದರ್ಶನ ಪಡೆದು, ಮುಂದೆ ಮುಂಬೈಯ ಶರ್ಮಿಳಾ ಗುಪ್ತೆಯವರಲ್ಲಿ ವಿದ್ಯುಕ್ತ ಕಲಾ ತರಬೇತಿಯನ್ನು ತನ್ನ 57ರ ವಯಸ್ಸಿನಲ್ಲಿ ಪಡೆದ ಸಾಧನೆ ಇವರದು. ವಸಂತಲಕ್ಷ್ಮೀ ಯವರು ಅಕಾಲಿಕವಾಗಿ ನಿಧನರಾದ ಒಂದು ವರ್ಷದಲ್ಲೇ ಅವರ ಚಿತ್ರಕಲಾ ನೈಪುಣ್ಯವನ್ನು ಸಾರುವ ‘ವಸಂತ ಕಲಾ’ ಎಂಬ ಈ ಚಿತ್ರಕಲಾ ಪ್ರದರ್ಶನವು ಅವರಿಗೆ ಸಲ್ಲಿಸುವ ವಿನಯಪೂರ್ವಕ ಶ್ರದ್ಧಾಂಜಲಿಯೇ ಆಗಿದೆ. ಸುಮಾರು ಎಪ್ಪತ್ತು ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.

ವಸಂತ ಕಲಾ ಚಿತ್ರಕಲಾ ಪ್ರದರ್ಶನವು ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ನವೆಂಬರ್ 1 ರಂದು ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರುತ್ತದೆ. ಅದರ ಉದ್ಘಾಟನೆಯನ್ನು ಮುಂಜಾನೆ ಕಲಾವಿದ ಯು ರಮೇಶ ರಾವ್, ಕಲಾವಿದೆ ಶರ್ಮಿಳಾ ಗುಪ್ತೆ ಯವರು ಮಾಡಲಿದ್ದಾರೆ ಎಂದು ಅದಿತಿ ಗ್ಯಾಲರಿಯ ಡಾ. ಕಿರಣ್ ಆಚಾರ್ಯ, ರಂಜನಿ ಮೆಮೋರಿಯಲ್ ಟ್ರಸ್ಟ್ ನ ಅರವಿಂದ ಹೆಬ್ಬಾರ್, ರಾಜಮೋಹನ ವಾರಂಬಳ್ಳಿ ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!