ಉಡುಪಿ, ಅ.30: ಮುಂಬೈ ಉತ್ತರದ ಸಂಸದರಾದ ಗೋಪಾಲ್ ಸಿ. ಶೆಟ್ಟಿ ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠಕ್ಕೆ ಭೇಟಿ ನೀಡಿ ಗುರುದೇವರ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಗುರುದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಂದಿರ ಮಠದ ಕಾರ್ಯಾಧ್ಯಕ್ಷರಾದ ಕೆ. ದಿವಾಕರ್ ಶೆಟ್ಟಿ ತೋಟದಮನೆ, ಆಡಳಿತ ಮಂಡಳಿಯ ತೋನ್ಸೆ ನವೀನ್ ಶೆಟ್ಟಿ, ಡಾ. ರಾಜೇಶ್ ರೈ, ಪ್ರಕಾಶ್ ಶೆಟ್ಟಿ, ವ್ಯವಸ್ಥಾಪಕ ರವೀಂದ್ರ ಪುತ್ರನ್ ಛಾತ್ರಬೆಟ್ಟು, ಅರ್ಚಕರಾದ ವಾಮನ ಆಚಾರ್ಯ, ಅಮಿತ್ ಶುಕ್ಲಾ ಉಪಸ್ಥಿತರಿದ್ದರು.
ಉಡುಪಿ ನಿತ್ಯಾನಂದ ಮಂದಿರ ಮಠಕ್ಕೆ ಮುಂಬೈ ಸಂಸದ ಭೇಟಿ

ಉಡುಪಿ ನಿತ್ಯಾನಂದ ಮಂದಿರ ಮಠಕ್ಕೆ ಮುಂಬೈ ಸಂಸದ ಭೇಟಿ
Date: