ಸಿದ್ಧಾಪುರ, ಅ.12: ಸಮೃದ್ಧಿ ಯುವಕ ಮಂಡಲ(ರಿ.) ಕುಳ್ಳುಂಜೆ, ಶಂಕರನಾರಾಯಣ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಲಾಡಿ ಇವರ ಸಹಯೋಗದೊಂದಿಗೆ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರವು ಸಮೃದ್ಧಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷರಾದ ಗಣೇಶ್ ತಲ್ಲಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಂತ್ ಮಾತನಾಡಿ, ನಾವು ಜೀವನದಲ್ಲಿ ನೆಮ್ಮದಿ ಕಾಣಬೇಕಾದರೆ ಆರೋಗ್ಯದ ಬಗ್ಗೆ ಕಾಳಜಿ ಅತೀ ಮುಖ್ಯವಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯೆ ಅನ್ನಪೂರ್ಣ ನಾಯ್ಕ, ಯುವಕ ಮಂಡಲದ ಮಾಜಿ ಅಧ್ಯಕ್ಷ ರಘುರಾಮ ಕುಳ್ಳುಂಜೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ದೀಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿ ಪ್ರಕಾಶ್ ನಾಯ್ಕ ಬಾಳೆಕೊಡ್ಲು ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಹರೀಶ್, ಸಿದ್ದನಗೌಡ, ನಾರಾಯಣ, ಆಶಾ ಕಾರ್ಯಕರ್ತೆ ಪೂರ್ಣಿಮ ದೇವಾಡಿಗ, ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ನರಸಿಂಹ ಎಲ್ಮಣ್ಣು, ಚಂದ್ರ ಕಾಸನಕೊಡ್ಲು, ಗೋಪಾಲ ಎಲ್ಮಣ್ಣು, ಸತೀಶ ಟಿ, ಕಾರ್ಯಕ್ರಮದ ವ್ಯವಸ್ಥಾಪಕರಾದ ಕೇಶವ ಮಕ್ಕಿಮನೆ, ದೇವೇಂದ್ರ, ಮಹೇಶ್ ನಾಯ್ಕ, ಶರತ್ ಗೊಲ್ಲ, ಭರತ್ ತಲ್ಲಂಜೆ, ರಮೇಶ್ ಎಲ್ಮಣ್ಣು ಮುಂತಾದವರು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಬಿ.ಪಿ., ಶುಗರ್, ಹಿಮೋಗ್ಲೋಬಿನ್ ಮತ್ತು ಇಸಿಜಿ ತಪಾಸಣೆಯನ್ನು ನಡೆಸಲಾಯಿತು. ಪ್ರವೀಣ್ ಬಾಳೆಕೊಡ್ಲು ಸ್ವಾಗತಿಸಿ, ಕಾರ್ಯದರ್ಶಿ ನಿತಿನ್ ಬಾಳೆಕೊಡ್ಲು ವಂದಿಸಿದರು. ನಾರಾಯಣ ತೆಂಕಿನದ್ದೆ ಕಾರ್ಯಕ್ರಮ ನಿರೂಪಿಸಿದರು.