ಉಡುಪಿ, ಅ.5: ಕೆಮ್ಮಣ್ಣು ಸರಕಾರಿ ಪದವಿಪೂರ್ವ ಕಾಲೇಜಿನ ನವೀಕೃತ ಸಭಾಂಗಣದ ಉದ್ಘಾಟನೆ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಸಂತೆಕಟ್ಟೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಡಾ. ಜೆರಿ ವಿನ್ಸೆಂಟ್ ಡಯಾಸ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಗ್ರಾಮೀಣ ಪರಿಸರದಲ್ಲಿ ಶೈಕ್ಷಣಿಕ ವಾತಾವರಣವನ್ನು ಉತ್ತಮಪಡಿಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದರು. ಸ್ವಚ್ಛತೆಯು ಕೇವಲ ಒಂದು ದಿನ ಆಚರಣೆ ಆಗದೆ ಪ್ರತಿನಿತ್ಯದ ಆದ್ಯತೆಯ ಕೆಲಸವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಅವರು ಮಾತನಾಡುತ್ತಾ, ಸ್ವಚ್ಛತೆಯ ವಿಚಾರದಲ್ಲಿ ದೇಶದಲ್ಲಿ ಉಡುಪಿಯ ಹೆಸರನ್ನು ಬೆಳಗಿಸುವ ಕಾರ್ಯ ಆಗಬೇಕು. ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ, ಪ್ರೌಢಶಾಲೆ ವಿಭಾಗದ ಮುಖ್ಯಸ್ಥರಾದ ವಂದನ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಪ್ರಭಾಕರ್ ಸಾಲಿಯಾನ, ಪ್ರೌಢಶಾಲೆ ವಿಭಾಗದ ನಿಕಟಪೂರ್ವ ಅಧ್ಯಕ್ಷರಾದ ನಂದಕಿಶೋರ್ ಕೆಮ್ಮಣ್ಣು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತಾರನಾಥ್, ನರಸಿಂಹಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೊನಾಲ್ಡ್ ಸುಹರಿಸ್, ಸಂತೆಕಟ್ಟೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಹ್ಯೂಬರ್ಟ್ ಲೂಯಿಸ್, ಪಂಚಾಯತ್ ಸದಸ್ಯರಾದ ಪ್ರಶಾಂತ್ ಕೆಮ್ಮಣ್ಣು, ಸಂಧ್ಯಾ ಸುಧಾಕರ್, ಗಣಪತಿ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಸಾಲಿಯಾನ್, ಲಯನ್ಸ್ ಕ್ಲಬ್ ಇಂದ್ರಾಳಿ ಅಧ್ಯಕ್ಷರಾದ ಅಜಿತ್ ಶೆಟ್ಟಿ, ಉದ್ಯಮಿ ಜೇಸನ್ ಡಯಾಸ್, ಸ್ವಚ್ಛ ಭಾರತ್ ಫ್ರೆಂಡ್ಸ್ ಇದರ ಗಣೇಶ್ ಪ್ರಸಾದ್, ಕಂಡಾಳ ಫ್ರೆಂಡ್ಸ್ ನ ಉದಯ ಕಂಡಾಳ, ಕಥೋಲಿಕ್ ಸಭಾ ಕೆಮ್ಮಣ್ಣು ಇದರ ಜ್ಯೋತಿ ಲೂಯಿಸ್ ಹಾಗೂ ಕಥೋಲಿಕ್ ಸಭಾ ಮೌಂಟ್ ರೋಸರಿ ಸಂತೆಕಟ್ಟೆ ಅಧ್ಯಕ್ಷರು, ಹಂಪನಕಟ್ಟೆ ಫ್ರೆಂಡ್ಸ್ ಅಧ್ಯಕ್ಷರು, ತೋನ್ಸೆ ಹೆಲ್ತ್ ಸೆಂಟರ್ ಇದರ ಡಾ. ಶ್ವೇತ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಉಮೇಶ್ ಅಮೀನ್, ಜೆಸಿಐ ಕಲ್ಯಾಣಪುರ ಇದರ ಅಧ್ಯಕ್ಷರಾದ ಅನಿತಾ ನರೇಂದ್ರ, ಕೆಮ್ಮಣ್ಣು ಕ್ರಿಕೆಟರ್ಸ್ ಅಧ್ಯಕ್ಷರು, ಜನಜಾಗ್ರತಿ ಸಂಸ್ಥೆಯ ಮುಖ್ಯಸ್ಥರಾದ ವೆಂಕಟೇಶ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು
ಸಿಡಿಸಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ಸ್ವಾಗತಿಸಿ, ಎಸ್. ಡಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷರಾದ ನಂದಕಿಶೋರ್ ಕೆಮ್ಮಣ್ಣು ವಂದಿಸಿದರು. ಸಂಧ್ಯಾ ಮತ್ತು ತೇಜಸ್ ಕಾರ್ಯಕ್ರಮ ನಿರೂಪಿಸಿದರು.