Monday, January 20, 2025
Monday, January 20, 2025

ಮುನಿಯಾಲು ಆಯುರ್ವೇದ ಸಂಸ್ಥೆಯ ಬುದ್ದಾಯುರ್ವೇದ್ ಆ್ಯಪ್ ಬಿಡುಗಡೆ

ಮುನಿಯಾಲು ಆಯುರ್ವೇದ ಸಂಸ್ಥೆಯ ಬುದ್ದಾಯುರ್ವೇದ್ ಆ್ಯಪ್ ಬಿಡುಗಡೆ

Date:

ಉಡುಪಿ, ಸೆ. 30: ಜನಸಾಮಾನ್ಯರ ಮಾನಸಿಕ ಆರೋಗ್ಯ ರಕ್ಷಣೆ, ದೈಹಿಕ ಆರೋಗ್ಯ ಪುನರ್‌ಸ್ಥಾಪನೆ ಹಾಗೂ ಆಯ್ದ ಗಿಡಮೂಲಿಕಾ ಕೃಷಿಯಿಂದ ನೆಲ, ಜಲ ಮತ್ತು ವಾಯು ಮಾಲಿನ್ಯಗಳಿಂದ ರಕ್ಷಣೆ ಮತ್ತು ರಾಜ್ಯದ ರೈತರ ಆದಾಯ ವೃದ್ಧಿ ಮುಂತಾದವುಗಳ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ಉಚಿತವಾಗಿ ಒದಗಿಸುವ ‘ಬುದ್ಧಾಯುರ್ವೇದ್ ಆ್ಯಪ್’ ನ್ನು ಮಣಿಪಾಲದ ಮುನಿಯಾಲು ಆಯುರ್ವೇದ ಸಂಸ್ಥೆಯು ಬಿಡುಗಡೆಗೊಳಿಸಿದೆ. ಈ ಆ್ಯಪ್‌ನ್ನು ತಮ್ಮ ಫೋನ್‌ನಲ್ಲಿ ರಿಜಿಸ್ಟರ್ ಮಾಡುವ ಮೂಲಕ ರಾಜ್ಯದ ಜನರು ಭಗವಾನ್ ಬುದ್ಧನ ಬೋಧನೆಯಾದ ತ್ರಿಪಿಟಕದ ಸಾರಾಂಶವಾದ ಕನ್ನಡ ಸಾರಸ್ವತಲೋಕದ ದಿಗ್ಗಜರಿಂದ ಪ್ರಶಂಸೆಗೊಳಗಾದ ಬಹುಬೇಡಿಕೆಯ ಸಮ್ಮಾಸಂಬುದ್ಧ ಮತ್ತು ಜಂಬೂದ್ವೀಪ, ವಿಶ್ವದ ಅತ್ಯಂತ ಶ್ರೇಷ್ಠ ಉಪದೇಶವಾದ ಚತುರಾರ್ಯ ಸತ್ಯ, ಕೌಟುಂಬಿಕ ಶಾಂತಿ ಮತ್ತು ಸುಭಿಕ್ಷೆಯನ್ನುಂಟು ಮಾಡುವ ಬೌದ್ಧ ರಕ್ಷಣಾ ಮಂತ್ರಗಳು, ಬುದ್ಧಾಯುರ್ವೇದ ಮಾಸಪತ್ರಿಕೆಗಳು, ಕನ್ನಡದಲ್ಲಿ ಪ್ರಥಮ ಬಾರಿಗೆ ಬುದ್ಧನ ಉನ್ನತ ಬೋಧನೆಯಾದ ಅಭಿದಮ್ಮ, ವಿಪಸ್ಸನಧ್ಯಾನ ಕ್ರಮವನ್ನು ವಿವರಿಸುವ ಮಹಾಸತಿಪಟ್ಟಾನಸುತ್ತ, ಧಮ್ಮಪದ, ಮಿಲಿಂದಪನ್ನ, ಜಾತಕಕತೆಗಳು, ಯೋಗ, ದಿನಚರ್ಯ, ನಡಿಗೆಯ ಧ್ಯಾನ ಮತ್ತು ಧ್ಯಾನಾಸಕ್ತರಿಗೆ ಧ್ಯಾನದ ಸಮಯದಲ್ಲಿ ತೊಂದರೆ ಕೊಡುವ ವಿವಿಧ ಆಲೋಚನೆಗಳ ನಿವಾರಣೆಯ ಮಾಹಿತಿ ನೀಡುವ “ಮುನಿಯೋಗ”, ರಾಜ್ಯದ ನೆಲ ಜಲ ಹಾಗೂ ವಾಯುಮಾಲಿನ್ಯಗಳಿಂದ ರಕ್ಷಣೆ ಮತ್ತು ರೈತರ ಆದಾಯ ಹೆಚ್ಚಿಸಲು ಗಿಡಮೂಲಿಕೆ ಕೃಷಿಯ ಮಾಹಿತಿನೀಡುವ “ವನದೇಗುಲ”, ದೀರ್ಘಕಾಲೀನ
ಕಾಯಿಲೆಗಳಿಗೆ ದೇಹ ಪ್ರಕೃತಿಯ ಆಧಾರದ ಮೇಲೆ ಉತ್ಕೃಷ್ಟಮಟ್ಟದ ಬುದ್ಧಾಯುರ್ವೇದ ಔಷಧಿಗಳು ಮತ್ತು ಚಿಕಿತ್ಸಾ ಕಲ್ಪಗಳ ಮಾಹಿತಿ, ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆಯಂತಹ ಸಾಮಾಜಿಕ ಪಿಡುಗು ನಿವಾರಣೆಯ ಚಿಕಿತ್ಸಾ ಮಾಹಿತಿ ನೀಡುವ ಮದಾತ್ಯಯಕಲ್ಪ ಮುಂತಾದ ಪುಸ್ತಕಗಳ್ನು ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಬುದ್ಧಾಯುರ್ವೇದ್ ಆ್ಯಪ್ ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಲ್ಲಿ ಲಭ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!