ಉಡುಪಿ, ಸೆ. 15: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಮೇ 2023ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಪುವಿನ ಪಾಂಡುರಂಗ ನಾಯಕ್ ಅವರಿಗೆ ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿಯವರು ಗೌರವಿಸಿ, ಶುಭ ಹಾರೈಸಿದರು. ಪಾಂಡುರಂಗ ನಾಯಕ್ ರವರಿಗೆ ತರಬೇತಿ ನೀಡಿದ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆಯ ಮಾಜಿ ಅಧ್ಯಕ್ಷ ಸಿಎ ನರಸಿಂಹ ನಾಯಕ್, ಪಾಂಡುರಂಗ ನಾಯಕ್ ಅವರ ತಾಯಿ ರೂಪಾ ನಾಯಕ್ ಹಾಗೂ ನಾಯಕ್ & ಅಸೋಸಿಯೇಟ್ಸ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರಾವ್ಯಾ ನಿರೂಪಿಸಿ ವಂದಿಸಿದರು.
ಸಿಎ ಸಾಧನೆ: ಪಾಂಡುರಂಗ ನಾಯಕ್ ಅವರಿಗೆ ಸನ್ಮಾನ

ಸಿಎ ಸಾಧನೆ: ಪಾಂಡುರಂಗ ನಾಯಕ್ ಅವರಿಗೆ ಸನ್ಮಾನ
Date: