ಉಡುಪಿ, ಸೆ. 10: ಛಾಯಾಗ್ರಹಣ ಕ್ಷೇತ್ರಕ್ಕೆ ಇರುವಷ್ಟು ಮಾನ್ಯತೆ ಬೇರೆ ಯಾವ ಕ್ಷೇತ್ರಕ್ಕೂ ಇಲ್ಲ. ಎಸ್.ಕೆ.ಪಿ.ಎ ಸಂಘಟನೆ ಅತ್ಯಂತ ಬಲಿಷ್ಠವಾಗಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆಯ 33ನೇ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಬಂಟರ ಯಾನೆ ನಾಡವರ ಸಂಘ ಮಂಗಳೂರು, ಉಡುಪಿ ವಲಯದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಹೇಳಿದರು. ಎಸ್.ಕೆ.ಪಿ.ಎ. ದ .ಕ ಉಡುಪಿ ಜಲ್ಲಾಧ್ಯಕ್ಷ ಆನಂದ ಎನ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಸಲಹಾ ಸಮಿತಿ ಸಂಚಾಲಕ ವಿಠಲ ಚೌಟ ಧ್ವಜಾರೋಹಣ ನೆರವೇರಿಸಿದರು
ಕಲಿಕಾ ಪ್ರೋತ್ಸಾಹ, ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಹಿರಿಯ ಛಾಯಾಗ್ರಾಹಕರನ್ನು ಗುರುತಿಸುವಿಕೆ, ವೈದ್ಯಕೀಯ ನೆರವು, ಕ್ರೀಡಾಕೂಟದ ಬಹುಮಾನ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಸ್.ಕೆ.ಪಿ. ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್, ಎಸ್.ಕೆ.ಪಿ.ಎ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಲೋಕೇಶ್ ಸುಬ್ರಹ್ಮಣ್ಯ, ಕೋಶಾದಿಕಾರಿ ನವೀನ್ ರೈ ಪಂಜಳ, ಕರುಣಾಕರ ಕಾನಂಗಿ, ಜಯಕರ ಸುವರ್ಣ, ವಿಲ್ಸನ್ ಗೊನ್ಸಾಲ್ವಿಸ್, ವಿಠ್ಠಲ್ ಚೌಟ, ಕೀರ್ತಿ ಮಂಗಳೂರು, ಶ್ರೀಧರ್ ಶೆಟ್ಟಿಗಾರ್, ಜಗನ್ನಾಥ ಶೆಟ್ಟಿ, ಹರೀಶ್ ರಾವ್, ಈಶ್ವರ್ ಕುಂಟಾಡಿ, ಪ್ರಕಾಶ್ ಬ್ರಹ್ಮಾವರ, ಹರೀಶ್ ಕುಂದರ್, ನಾಗೇಶ್ ಟಿ.ಎಸ್, ಜನಾರ್ದನ್ ಕೊಡವೂರು, ವಿನೋದ್ ಕಾಂಚನ್, ಸುನಿಲ್ ಮೂಡುಬಿದ್ರೆ, ದೊಟ್ಟಯ್ಯ ಕುಂದಾಪುರ, ರಮೇಶ್ ಸುರತ್ಕಲ್, ಸುಧಾಕರ್ ಶೋಕೆಸ್, ಅಶೋಕ್ ಆಚಾರ್ಯ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಆನಂದ್ ಎನ್ ಕುಂಪಲ ಸ್ವಾಗತಿಸಿ. ಕಾರ್ಯದರ್ಶಿ ನಿತಿನ್ ಬೆಳುವಾಯಿ ವಂದಿಸಿದರು. ರಾಘವೇಂದ್ರ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.