ಉಡುಪಿ, ಸೆ. 8: ಶ್ರೀ ಕೃಷ್ಣ ಸೇವಾ ಬಳಗ, ಶ್ರೀ ಅದಮಾರು ಮಠ ಉಡುಪಿ ವತಿಯಿಂದ ಸೆಪ್ಟೆಂಬರ್ 9 ಶನಿವಾರ ವಿಶ್ವಾರ್ಪಣಮ್ ಚಿಂತನ ಮಂಥನ ಮತ್ತು ಸಂವಾದ ಕಾರ್ಯಕ್ರಮ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ನಟ, ನಿರ್ದೇಶಕ, ರಂಗಭೂಮಿ ಕಲಾವಿದ ‘ದಿ ಕಾಶ್ಮಿರ್ ಫೈಲ್ಸ್’ ಖ್ಯಾತಿಯ ಪ್ರಕಾಶ್ ಬೆಳವಾಡಿ ‘ಸೃಜನಾತ್ಮಕ ಭಾರತೀಯ ಅಸ್ಮಿತೆ ಮತ್ತು ಮಣಿಪುರದ ವಿದ್ಯಮಾನಗಳು’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಲೇಖಕ, ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಸಂಪೂರ್ಣವಾಗಿ ಕನ್ನಡದಲ್ಲೇ ನಡೆಯುವ ಈ ಕಾರ್ಯಕ್ರಮದ ಉಚಿತ ಪ್ರವೇಶ ಪತ್ರಗಳು ಅದಮಾರು ಮಠದ ವಿಶ್ವಾರ್ಪಣಮ್ ಕಾರ್ಯಾಲಯದಲ್ಲಿ ಲಭ್ಯವಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.