Friday, January 24, 2025
Friday, January 24, 2025

ಆರೋಗ್ಯಕರ ಸ್ಪರ್ಧೆಗಳಿಂದ ಪ್ರತಿಭೆ ಅನಾವರಣ: ರಶ್ಮಿ ಸಿ. ಭಟ್

ಆರೋಗ್ಯಕರ ಸ್ಪರ್ಧೆಗಳಿಂದ ಪ್ರತಿಭೆ ಅನಾವರಣ: ರಶ್ಮಿ ಸಿ. ಭಟ್

Date:

ಉಡುಪಿ, ಸೆ. 4: ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ ಮತ್ತು ಪ್ರತಿಭೆಯ ಅನಾವರಣವಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ತಮಗೆ ಲಭಿಸಿರುವ ಭಾಗವಹಿಸುವಿಕೆಯ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಸ್ಪರ್ಧಾತ್ಮಕ ವಾತಾವರಣದಲ್ಲಿ ಕಲಿಕೆಯೂ ಕೂಡ ವೇಗವಾಗಿ ಸಾಗುತ್ತಿರುತ್ತದೆ ಎಂದು ಅಜ್ಜರಕಾಡು ವಾರ್ಡ್ ನಗರಸಭಾ ಸದಸ್ಯರಾದ ರಶ್ಮಿ ಸಿ. ಭಟ್ ಅಭಿಪ್ರಾಯಪಟ್ಟರು. ಅವರು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾದ ರವೀಶ್ ಚಂದ್ರ ಶೆಟ್ಟಿ ಶುಭ ಹಾರೈಸಿದರು. ಅಪರಾಹ್ನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಾಫಲ್ಯ ಟ್ರಸ್ಟ್ ನ ಅಧ್ಯಕ್ಷೆ ರತ್ನ ಅಶೋಕ್ ಶೆಟ್ಟಿ ಮಾತನಾಅಡಿ, ವಿದ್ಯಾರ್ಥಿ ದೆಸೆಯಲ್ಲಿ ಚಿಗುರೊಡೆದ ಪ್ರತಿಭೆಯನ್ನು ಬೆಳೆಯಲು ಅವಕಾಶ ಕೊಟ್ಟರೆ ಮುಂದಿನ ಭವಿಷ್ಯದಲ್ಲಿ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿಜಯಕುಮಾರ್ ಮುದ್ರಾಡಿ, ನಿವೃತ್ತ ಪ್ರಾಂಶುಪಾಲೆ ಹಂಸವತಿ, ಎಸ್.ಡಿ.ಎಮ್.ಸಿ ಗೌರವಾಧ್ಯಕ್ಷೆ ತಾರಾದೇವಿ, ಅಧ್ಯಕ್ಷೆ ವಿನೋದಾ ಸುವರ್ಣ, ಸಾಫಲ್ಯ ಟ್ರಸ್ಟ್ ನ ನಿರುಪಮಾ ಪ್ರಸಾದ್ ಶೆಟ್ಟಿ, ಹರಿಣಾ, ವಿಶ್ವನಾಥ ಬಾಯರಿ, ಬಿ ಆರ್ ಪಿ ಮೀನಾ ಕುಮಾರಿ ಭಾಗವಹಿಸಿದ್ದರು

ಶಾಲಾ ಶಿಕ್ಷಣ ಇಲಾಖೆ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಉಡುಪಿ ಇವುಗಳ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿ. ಜ್ಯೋತಿ ವಂದಿಸಿದರು. ಶಿಕ್ಷಕಿ ಪ್ರವೀಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿಮಗೆ ಪ್ಯಾಷನ್ ಇದೆಯೇ?

ಸುಬ್ಬನಿಗೆ ಗಾಯಕನಾಗುವ ಆಸೆ. ಸುಬ್ಬಿಗೆ ನರ್ತಕಿಯಾಗುವ ಆಸೆ. ಆದರೆ ಇಬ್ಬರಲ್ಲಿ ವ್ಯತ್ಯಾಸವಿದೆ....

ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರ್ಯಾಗಾರ

ಉಡುಪಿ, ಜ.23: ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ...
error: Content is protected !!