Monday, January 20, 2025
Monday, January 20, 2025

ಉಡುಪಿಯಲ್ಲಿ ‘ಕಲರ್ಸ್ ಅಫ್‌ ಶ್ರೀಕೃಷ್ಣ ಲೀಲೋತ್ಸವ’ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿಯಲ್ಲಿ ‘ಕಲರ್ಸ್ ಅಫ್‌ ಶ್ರೀಕೃಷ್ಣ ಲೀಲೋತ್ಸವ’ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

Date:

ಉಡುಪಿ, ಸೆ. 2: ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಪ್ರವಾಸೋಧ್ಯಮ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ ‘ಕಲರ್ಸ್ ಅಫ್‌ ಶ್ರೀ ಕೃಷ್ಣ ಲೀಲೋತ್ಸವ’ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಬಹುಮಾನಿತರಿಗೆ ಪ್ರಥಮ 10,000.00, ದ್ವಿತೀಯ 5,000.00, ತ್ರಿತೀಯ 3,000.00 ಹಾಗು 5 ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ, ವಿಶೇಷ ಉಡುಗೊರೆಗಳು ಇರಲಿದೆ.

​ಸ್ಪರ್ಧೆಯ ನಿಯಮಗಳು: ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು​ ಕಳುಹಿಸಬಹುದು.​ ​ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4 ​ಎಂ.ಬಿ ಗಿಂತ ಹೆಚ್ಚು​ ಮೀರಬಾರದು.​ ಮೊಬೈಲ್‌ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ​ಪರಿಗಣಿಸುವುದಿಲ್ಲ. ಪೋಟೋಶಾಪ್‌ನಲ್ಲಿ ತಿರುಚಲಾದ ಮತ್ತು ವಾಟರ್‌ ಮಾರ್ಕ್‌​ ಇದ್ದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.​ ಒಂದು ಬಾರಿ ನೋಂದಣಿಯಾದ ಛಾಯಾಚಿತ್ರಗಳನ್ನು​ ಬದಲಾಯಿಸಲು ಅವಕಾಶವಿರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ.​ ಇಮೇಲ್‌ ಮೂಲಕ ಕಳುಹಿಸುವಾಗ​ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ​ ನೋಂದಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು​. ತೀರ್ಪುಗಾರರ ತೀರ್ಮಾನವೇ ಅಂತಿಮ.​

ಉಡುಪಿಯ ರಥಬೀದಿಯಲ್ಲಿ ನಡೆಯುವ ವಿಟ್ಟಪಿಂಡಿಯ​ ದಿನದಂದು (07-09-2023) ಸೆರೆಹಿಡಿದ ಛಾಯಾಚಿತ್ರಗಳು​ ಮಾತ್ರ.​ ನೋಂದಾಯಿಸಲು ಕೊನೆಯ ದಿನಾಂಕ 05-09-2023​.​​ ನೋಂದಾಯಿಸಿದ ಎಲ್ಲಾ ಛಾಯಾಗ್ರಾಹಕರಿಗೆ ಒಂದು​ ​ಟಿ-ಶರ್ಟ್‌ ​ಉಚಿತ.​ ಛಾಯಾಚಿತ್ರವನ್ನು ಕಳುಹಿಸಲು ಕೊನೆಯ ದಿನಾಂಕ​ 17.09.2023. ಫಲಿತಾಂಶವನ್ನು ದಿನಾಂಕ 30.09.2023ರಂದು ಪ್ರಕಟಿಸಲಾಗುವುದು. ಟಿ-ಶರ್ಟ್‌ ಧರಿಸಿ​ಯೇ ಛಾಯಾಗ್ರಹಣವನ್ನು ಮಾಡತಕ್ಕದ್ದು.​ ಸ್ಪರ್ಧೆಗೆ ಬಂದ ಛಾಯಾಚಿತ್ರವನ್ನು ಯಾವುದೇ ಪೂರ್ವಾನುಮತಿ ಇಲ್ಲದೆ​ ಬಳಸುವ ಹಕ್ಕನ್ನು ಪಡೆದಿರುತ್ತದೆ. ​

ಛಾಯಾಚಿತ್ರಗಳನ್ನು ​ಕಳುಹಿಬೇಕಾದ ಇಮೈಲ್ : [email protected]. ಹೆಚ್ಚಿನ ಮಾಹಿತಿಗಾಗಿ 9019573166, 7204146368, 9448252363 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!