ಕಾರ್ಕಳ, ಆ. 22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವೆಯು ದೈವಿಕ ಕಾರ್ಯವೇ ಸರಿ ಎಂದು ಡಾ.ಟಿ.ಎಂ.ಎ.ಪೈ ರೋಟರಿ ಹಾಸ್ಪಿಟಲ್‌ನ ಪ್ರಸೂತಿ ವಿಭಾಗ ಮುಖ್ಯಸ್ಥರಾದ ಡಾ.ಸಂಜಯ್ ಕುಮಾರ್ ಕೆ.ಆರ್. ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪಾಲ ಶೆಟ್ಟಿಯವರ 102 ನೇ ಜನ್ಮ ದಿನದ ಪ್ರಯುಕ್ತ ನಡೆದ ಸಂಸ್ಥಾಪಕರ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅಭ್ಯಾಗತರಿಗೆ ಮಾತನಾಡಿದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಡಾ.ಸುಧಾಕರ್ ಶೆಟ್ಟಿಯವರು ತನ್ನ ತಂದೆಯವರ ಆದರ್ಶದ ಪಥವನ್ನು ಅನುಸರಿಸಿಕೊಂಡು ಹೋಗುತ್ತಿರುವ ಸಾಮಾಜಿಕ ಕಾರ್ಯವು ಶ್ಲಾಘನೀಯ ಎಂದರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಅಭಿನಂದನ್ ಶೆಟ್ಟಿ ಮಾತನಾಡಿ, ಯಾವುದೇ ಗುರಿ ಉದ್ದೇಶ ಈಡೇರಲು ಪ್ರಾರಂಭ ಮುಖ್ಯವಲ್ಲ ಅದರ ಅಂತಿಮ ಗುರಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾಭ್ಯಾಸದೊಂದಿಗೆ ಮೌಲ್ಯಯುತ ಬದುಕು ಕಟ್ಟಿಕೊಡುತ್ತಿರುವ ಸಂಸ್ಥೆಯ ಸಾಮಾಜಿಕ ಕಳಕಳಿ ಮತ್ತು ಒಂದು ಸಂಸ್ಥೆಗಿರುವ ಜವಾಬ್ದಾರಿಯನ್ನು ಜ್ಞಾನಸುಧಾದ ಮುಖೇನ ಸಾಕಾರಗೊಳ್ಳುತ್ತಿರುವುದು ಪ್ರಶಂಸನೀಯ ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಸಂಸ್ಥಾಪಕ ದಿ.ಗೋಪಾಲ ಶೆಟ್ಟಿಯವರ ಜನ್ಮದಿನದ ಸ್ಮರಣೆಯೊಂದಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯಂದು ಕಾರ್ಕಳ ರೋಟರಿ ಆಸ್ಪತ್ರೆಗೆ ಬೇಟಿಯಾಗಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವವರ ತಗಲುವ ವೆಚ್ಚದ ಶೇ.30ರಂತೆ 1.5 ಲಕ್ಷ ರೂ. ಸಹಾಯ ಧನವನ್ನು ಡಾ.ಸಂಜಯ್ ಕುಮಾರ್‌ರವರ ಮೂಲಕ ಹಸ್ತಾಂತರಿಸಲಾಯಿತು. ಜೊತೆಗೆ ಹೊಸ ಬೆಳಕು ಹಾಗೂ ವಿಶ್ವಾಸದ ಮನೆ ಅನಾಥಾಶ್ರಮಗಳಿಗೆ ತಲಾ ರೂ.25ಸಾವಿರ ನೆರವನ್ನು ಹಾಗೂ ಮೂವರು ಅನಾರೋಗ್ಯ ಪೀಡಿತರಾದ ಮಕ್ಕಳಿಗೆ ಧನಸಹಾಯವನ್ನು ನೀಡಲಾಯಿತು. ಇದೇ ಸಂದರ್ಭ ಟ್ರಸ್ಟಿನ ವತಿಯಂದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಾದ ನಾಗಮ್ಮ, ವಿಜಯ ಲಕ್ಷ್ಮೀ, ಶಶಿಕಲಾ, ರತ್ನ, ವಸಂತಿ, ಹಾಗೂ ಶಾಲಾ್ ಅಡುಗೆ ಸಹಾಯಕಿಯರಾದ ವನಿತಾ, ಸುಮಿತ್ರಾ, ಕುಶಲಾ, ಶೋಭಾ, ರಾಜೀವಿ, ಜ್ಯೋತಿ, ಸವಿತಾ, ಶಶಿಕಲಾ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಸಂಸ್ಥಾಪಕರ ದಿನಾಚರಣೆಯ ಮುಂದುವರಿದ ಭಾಗವಾಗಿ ಪ್ರತಿ ವರ್ಷದಂತೆ ಡಿಸೆಂಬರ್ 22 ರಂದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳನು ಗುರುತಿಸಿ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗುತ್ತದೆ. ಇದೇ ಸಂದರ್ಭ ಸಂಸ್ಥೆಯಿಂದ ಪ್ರಕಟಿಸುವ ಜ್ಞಾನಸುಧಾ ಪತ್ರಿಕೆ-೩೫ನ್ನು ಬಿಡುಗಡೆಗೊಳಿಸಲಾಯಿತು.
ರಕ್ತದಾನ ಶಿಬಿರ: ಸಂಸ್ಥಾಪಕರ ದಿನದ ಪ್ರಯುಕ್ತ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಎನ್.ಸಿ.ಸಿ, ಎನ್.ಎಸ್.ಎಸ್., ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಕಾರ್ಕಳ ರೆಡ್ ಕ್ರಾಸ್ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ರಕ್ತ ನಿಧಿ ಕೇಂದ್ರ ಅಜ್ಜರಕಾಡು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. 118 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಟ್ರಸ್ಟ್ನ ಅದ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಗಳ ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.