ಕೊಕ್ಕರ್ಣೆ, ಆ. 21: ಶ್ರೀ ಮಹಾಲಿಂಗೇಶ್ವರ ಫ್ರೆಂಡ್ಸ್ ಸೂರಾಲು, ಸ್ವಾವಲಂಬಿ ಭಾರತ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಕ್ಕರ್ಣೆ ಹಾಗೂ ಸಮುದಾಯ ವೈದ್ಯಕೀಯ ವಿಭಾಗ, ಕೆಎಂಸಿ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೊಕ್ಕರ್ಣೆ ಸೂರಾಲು ಶಾಲೆಯಲ್ಲಿ ನಡೆಯಿತು.
ಶ್ರೀ ಮಹಾಲಿಂಗೇಶ್ವರ ಫ್ರೆಂಡ್ಸ್ ನ ಅಧ್ಯಕ್ಷರಾದ ಗಣೇಶ್ ಸೂರಾಲು ಅಧ್ಯಕ್ಷತೆ ವಹಿಸಿದ್ದರು.
ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಸುರೇಶ್ ನಾಯಕ್, ಸಮುದಾಯ ವೈದ್ಯಕೀಯ ವಿಭಾಗದ ಡಾ. ಗಹನ್ ಜೋಯಿಸ್, ಸ್ವಾವಲಂಬಿ ಭಾರತ ಇದರ ಸದಸ್ಯರು ಹಾಗೂ ಕೊಕ್ಕರ್ಣೆ ಗ್ರಾಮ ಪಂಚಾಯತ್ ನ ಸದಸ್ಯರಾದ ಗಣೇಶ್ ಸೂರಾಲು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಸರ್ವೋತ್ತಮ ಶೆಟ್ಟಿ ಸೂರಾಲು ಅವರು ಉಪಸ್ಥಿತರಿದ್ದರು. ಗಣೇಶ್ ಚೆಗ್ರಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಹೃದ್ರೋಗ, ಸ್ತ್ರೀ ರೋಗ, ಇ.ಸಿ.ಜಿ., ರಕ್ತ ಪರೀಕ್ಷೆ, ಚರ್ಮ ಸಂಬಂಧಿತ ಹಾಗೂ ಇನ್ನಿತರ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು.