Friday, January 24, 2025
Friday, January 24, 2025

ಉಡುಪಿ: ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥ

ಉಡುಪಿ: ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥ

Date:

ಉಡುಪಿ, ಆ.12: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗಾಗಿ ಉಡುಪಿ ಅಂಚೆ ವಿಭಾಗದ ವತಿಯಿಂದ ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಜಾಥ ಉಡುಪಿ ನಗರದಲ್ಲಿ ನಡೆಯಿತು. ಉಡುಪಿ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಜಾಥಕ್ಕೆ ಚಾಲನೆ ನೀಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ, ಕಳೆದ ಬಾರಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ವಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಭಾರತೀಯ ಅಂಚೆ ಇಲಾಖೆಯ ಪಾತ್ರ ಬಹಳ ಮಹತ್ತರವಾಗಿತ್ತು. ಆ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಪ್ರತಿಯೊಂದು ಮನೆಗೆ ತ್ರಿವರ್ಣ ಧ್ವಜವನ್ನು ತಲುಪಿಸುವ ಕಾರ್ಯ ಮಾಡಲಾಗಿತ್ತು.

ಉಡುಪಿ ಅಂಚೆ ವಿಭಾಗದಿಂದ 20 ಸಾವಿರತ್ಕೂ ಅಧಿಕ ತ್ರಿವರ್ಣ ಧ್ವಜವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಅದೇ ರೀತಿ ಈ ಬಾರಿಯೂ ಸ್ವಾತಂತ್ರೋತ್ಸವವನ್ನು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ಇಲಾಖೆಗೆ ಸೂಚನೆ ಬಂದಿದೆ. ಅದಕ್ಕಾಗಿ ಇಲಾಖೆಗೆ ಒಟ್ಟು 22 ಸಾವಿರ ತ್ರಿವರ್ಣ ಧ್ವಜ ಬಂದಿದೆ. ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. ಅದರೊಂದಿಗೆ ಈ ಕುರಿತು ಜನಜಾಗೃತಿ ಮೂಡಿಸಲು ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಆ.13 ಭಾನುವಾರ ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೆ ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ವಿಶೇಷ ಕೌಂಟರ್ ಗಳಲ್ಲಿ ತ್ರಿವರ್ಣ ಧ್ವಜ ಖರೀದಿಗೆ ಅವಕಾಶವಿದೆ. ಧ್ವಜವೊಂದರ ಬೆಲೆ 25 ರೂ. ಆಗಿದೆ. ಅದೇ ರೀತಿ ಅಂಚೆ ಇಲಾಖೆಯ ವೆಬ್‌ಸೈಟ್‌ನಿಂದ ಆನ್‌ಲೈನ್ ಮೂಲಕ ಕೂಡ ತ್ರಿವರ್ಣ ಧ್ವಜವನ್ನು ಖರೀದಿಸಬಹುದು ಎಂದರು.

ಉಡುಪಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ್ ವಿಠಲ ಭಟ್, ವಸಂತ್, ದಯಾನಂದ ದೇವಾಡಿಗ, ಅಂಚೆ ನಿರೀಕ್ಷಕರಾದ ಶಂಕರ ಲಮಾಣಿ, ಶಶಿಕುಮಾರ್ ಹೀರೆಮಠ, ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರುಪ್ರಸಾದ್, ಉಡುಪಿ ಅಂಚೆ ವಿಭಾಗದ ಅಂಚೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಡುಪಿ ಅಂಚೆ ಕಚೇರಿಯಿಂದ ಹೊರಟ ಜಾಥವು ಹಳೆ ಪೋಸ್ಟ್ ಆಫೀಸ್ ರಸ್ತೆ ಮೂಲಕ ಸಾಗಿ ಹಳೆ ಡಯಾನಾ ವೃತ್ತದಿಂದ ತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ವಾಪಾಸು ಉಡುಪಿ ಅಂಚೆ ಕಚೇರಿಯ ಬಳಿ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಿಮಗೆ ಪ್ಯಾಷನ್ ಇದೆಯೇ?

ಸುಬ್ಬನಿಗೆ ಗಾಯಕನಾಗುವ ಆಸೆ. ಸುಬ್ಬಿಗೆ ನರ್ತಕಿಯಾಗುವ ಆಸೆ. ಆದರೆ ಇಬ್ಬರಲ್ಲಿ ವ್ಯತ್ಯಾಸವಿದೆ....

ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರ್ಯಾಗಾರ

ಉಡುಪಿ, ಜ.23: ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ...
error: Content is protected !!