ಉಡುಪಿ, ಜು.20: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.) ಇದರ ರಜತ ಮಹೋತ್ಸವದ ಅಂಗವಾಗಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ನೇತೃತ್ವದಲ್ಲಿ, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕೃಷ್ಣ ಉಪಾಧ್ಯಾಯ ಪುತ್ತೂರು ಹಾಗೂ ಅಕ್ಷಯ ಗೋಖಲೆ ಕಾರ್ಕಳ ಇವರಿಂದ ವಿಪ್ರ ಸಮಾಜದ ಸಂಸ್ಕೃತಿ, ಸಂಸ್ಕಾರ, ಸಮಸ್ಯೆಗಳು ಹಾಗೂ ಪರಿಹಾರ ಈ ವಿಷಯದಲ್ಲಿ ಉಪನ್ಯಾಸ ಹಾಗೂ ಚರ್ಚಾಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿ ನೀಡಿದ ಗಣ್ಯರಿಬ್ಬರು , ಹೆತ್ತವರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೊಡುವಲ್ಲಿ ಸಫಲರಾದರೆ ಇದೀಗ ವಿಪ್ರ ಸಮಾಜ ಎದುರಿಸುತ್ತಿರುವ ಲವ್ ಜಿಹಾದ್, ವಿವಾಹ ವಿಚ್ಛೇದನ , ಅಂತರ್ಜಾತಿಯ ವಿವಾಹ ಮುಂತಾದವುಗಳನ್ನು ತಡೆಗಟ್ಟುವುದರಲ್ಲಿ ಸಂಶಯವೇ ಇಲ್ಲ ಎಂದು ವಾದವನ್ನು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿಯ ನಿಕಟಪೂರ್ವ ಶಾಸಕ ಕೆ. ರಘುಪತಿ ಭಟ್ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿ ವಿಪ್ರ ಯುವಕ- ಯುವತಿಯರು ಹಿಂದೂ ಸಮಾಜ ಬೆಳೆಸುವಲ್ಲಿ ಸಹಕರಿಸುವುದಲ್ಲದೆ ರಾಜಕೀಯ ಕ್ಷೇತ್ರ ಹಾಗೂ ಆಡಳಿತಾತ್ಮಕ ಸೇವೆಯಲ್ಲಿಯೂ ಆಸಕ್ತಿಯನ್ನು ತೋರಿಸಿ ದೇಶವನ್ನು ಮುನ್ನಡೆಸುವಲ್ಲಿ ತಮ್ಮ ಕೌಶಲ್ಯತೆಯನ್ನು ತೋರಿಸಬೇಕು ಎಂದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಜತ ಮಹೋತ್ಸವದ ಕಾರ್ಯಧ್ಯಕ್ಷ ಎಂ. ಶ್ರೀನಿವಾಸ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಅಧ್ಯಕ್ಷ ಕೀಳಂಜೆ ಕೃಷ್ಣರಾಜ ಭಟ್ ಸ್ವಾಗತಿಸಿ, ಕಾರ್ಯದರ್ಶಿ ನಾಗರಾಜ ಭಟ್ ವಂದಿಸಿದರು. ತಾಲೂಕು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಂದೀಪ್ ಮಂಜ, ರಜತ ಮಹೋತ್ಸವದ ಕಾರ್ಯದರ್ಶಿ ಬೈಲೂರು ಜಯರಾಮ ಆಚಾರ್, ರಂಗನಾಥ ಸಾಮಗ ಸಭೆಯಲ್ಲಿ ಉಪಸ್ಥಿತರಿದ್ದರು.