Wednesday, January 22, 2025
Wednesday, January 22, 2025

ಜ್ಞಾನಸುಧಾದ ಡಾ.ಪ್ರಜ್ವಲ್ ಕುಲಾಲ್‌ ಸಂಶೋಧನಾ ಲೇಖನ ಅಮೆರಿಕಾದ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟ

ಜ್ಞಾನಸುಧಾದ ಡಾ.ಪ್ರಜ್ವಲ್ ಕುಲಾಲ್‌ ಸಂಶೋಧನಾ ಲೇಖನ ಅಮೆರಿಕಾದ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ ಪ್ರಕಟ

Date:

ಕಾರ್ಕಳ, ಜು. 19: ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪ್ರಜ್ವಲ್ ಕುಲಾಲ್‌ರವರ ಸಂಶೋಧನಾ ಲೇಖನವು ಅಮೆರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ನಲ್ಲಿ
ಪ್ರಕಟಗೊಂಡಿರುತ್ತದೆ. ನೀರಿನ ಶುದ್ಧೀಕರಣ ಕ್ಷೇತ್ರದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್‌ಗಳಾಗಿ ಪರಿಣಾಮಕಾರಿಯಾಗಿ ಬಳಸುವ ಸಂಶೋಧನೆಯನ್ನು ಗುರುತಿಸಿ 2022ರಲ್ಲಿ ಅಮೆರಿಕಾದ ಪ್ರತಿಷ್ಠಿತ ನೋವಾ ಸಯನ್ಸ್ ಪಬ್ಲಿಷರ್ಸ್ನವರು ತಮ್ಮ ವಿಜ್ಞಾನ ಸಂಬಂಧಿ ಸಂಪಾದನಾ ಕೃತಿಯ ಒಂದು ಅಧ್ಯಾಯಕ್ಕೆ ಲೇಖನಾ ಪ್ರಬಂಧವನ್ನು ಇವರಿಂದ ಅಹ್ವಾನಿಸಿದ್ದರು.

ಇರಾನಿನ ಊರ್ಮಿಯಾ ವಿವಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಮಹಮ್ಮದ್ ಸಿರೌಸಾಝರ್‌ರವರ ಪ್ರಧಾನ ಸಂಪಾದಕತ್ವದಲ್ಲಿ ರೂಪುಗೊಂಡ ಕೃತಿಯಾದ ‘ನ್ಯಾನೋ ಕಾಂಪೋಸಿಟ್ ಹೈಡ್ರೋಜೆಲ್ಸ್ ಆಂಡ್ ದೆಯರ್ ಎಮರ್ಜಿಂಗ್ ಅಪ್ಲಿಕೇಶನ್ಸ್’ ಇದರ 13ನೇ ಅಧ್ಯಾಯವಾಗಿ ಪ್ರಜ್ವಲ್‌ರವರ ಪ್ರಬಂಧವು ಪ್ರಕಟಗೊಂಡಿರುವುದು ಹೆಮ್ಮೆಯ ಸಂಗತಿ. ಈ ಅಧ್ಯಾಯದಲ್ಲಿ ಸಸ್ಯಜನಕ ಪಾಲಿಸ್ಯಾಕರೈಡ್‌ಗಳನ್ನು ನ್ಯಾನೋ ಕಾಂಪೊಸಿಟ್ ಹೈಡ್ರೋಜೆಲ್ ಗಳಾಗಿ ಪರಿವರ್ತಿಸಿ ನೀರನ್ನು ಕಲುಷಿತಗೊಳಿಸುವ ವಿಷಕಾರಿ ಪಾದರಸದ ಅಯಾನುಗಳನ್ನು ಬೇರ್ಪಡಿಸಿ ನೀರನ್ನು ಶುದ್ಧೀಕರಣಗೊಳಿಸುವ ಹಲವಾರು ಪ್ರಯೋಗಗಳನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

ಈ ಸಂಪಾದನಾ ಕೃತಿಯಲ್ಲಿ ವಿಶ್ವದ ವಿವಿಧ ದೇಶಗಳ ಪರಿಣತ ರಸಾಯನಶಾಸ್ತ್ರ ಸಂಶೋಧಕರಿಂದ ಪ್ರಕಟಗೊಂಡ ಒಟ್ಟು 14 ಅಧ್ಯಾಯಗಳಲ್ಲಿ ಭಾರತದ ಮೂವರ ಅಧ್ಯಾಯವು ಸೇರ್ಪಡೆಗೊಂಡಿರುತ್ತದೆ. ಆ ಮೂವರಲ್ಲಿ ಡಾ. ಪ್ರಜ್ವಲ್‌ರವರು ಓರ್ವರಾಗಿದ್ದಾರೆ. ಡಾ. ಪ್ರಜ್ವಲ್ ಕುಲಾಲ್ ಮಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಶಾಲಾಕ್ಷಿ ಬಿ.ಯವರ ಮಾರ್ಗದರ್ಶನದಲ್ಲಿ ಈ ಸಂಶೋದನಾ ಲೇಖನವನ್ನು ಸಿದ್ದಪಡಿಸಿದ್ದರು. ಜೊತೆಗೆ 2020 ರಲ್ಲಿ ಕೋಲ್ಕತ್ತಾದ ಇಂಡಿಯನ್ ಕೆಮಿಕಲ್ ಸೊಸೈಟಿಯವರು ಕೊಡಮಾಡಿದ ‘ಯುವ ವಿಜ್ಞಾನಿ’ ಪುರಸ್ಕಾರಕ್ಕೂ ಭಾಜನರಾಗಿದ್ದರು. 2022ರಲ್ಲಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕಾರ್ಕಳದ ಹಿರ್ಗಾನ ಗ್ರಾಮದ ಜಲಜ ಕುಲಾಲ್ ಮತ್ತು ಚಂದ್ರಶೇಖರ ದಂಪತಿಗಳ ಪುತ್ರರಾದ ಪ್ರಜ್ವಲ್ ಕುಲಾಲ್‌ರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ಹರ್ಷ ವ್ಯಕ್ತಪಡಿಸಿದ್ದು, ಜ್ಞಾನಸುಧಾ ಪರಿವಾರ ಅಭಿನಂದನೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ.23: (ನಾಳೆ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಡುಪಿಗೆ

ಉಡುಪಿ, ಜ.22: ಕರ್ನಾಟಕ ಸರಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು...

ಪೆರ್ಡೂರು: ಕೊರಗ ಸಮುದಾಯದ ಕಾಲನಿಗೆ ಶಾಸಕರ ಭೇಟಿ

ಪೆರ್ಡೂರು, ಜ.22: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಡಿ ಕೊರಗರ ಕಾಲೋನಿಗೆ...

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...
error: Content is protected !!