ತೆಂಕನಿಡಿಯೂರು, ಜು. 6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐ.ಕ್ಯೂ.ಎ.ಸಿ., ಎನ್.ಎಸ್.ಎಸ್., ಯೂತ್ ರೆಡ್‌ಕ್ರಾಸ್ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಉಡುಪಿ ವಲಯ ಇವರ ಸಂಯುಕ್ತಾಶ್ರಯದಲ್ಲಿ ವನಮಹೋತ್ಸವ ಸಪ್ತಾಹದ ಅಂಗವಾಗಿ ಗಿಡ ನೆಡುವ ಮತ್ತು ಸಸಿ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ನ್ಯಾಯಾಧೀಶರಾದ ಶರ್ಮಿಳಾ ಎಸ್. ಅವರು ನಮ್ಮ ಪೂರ್ವಜರು ಸಾಕಷ್ಟು ಶ್ರಮ ವಹಿಸಿ ಬೆಳೆಸಿದ ಕಾಡನ್ನು ನಾವು ನಾಶ ಮಾಡಿದ್ದಲ್ಲದೆ ಇಂದು ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯನ್ನು ಮತ್ತಷ್ಟು ನಾಶಪಡಿಸುತ್ತಿದ್ದೇವೆ. ಕೇವಲ ದಿನಾಚರಣೆಗಳಿಗಷ್ಟೇ ಪರಿಸರ ಜಾಗೃತಿ ಸೀಮಿತವಾಗಬಾರದು. ಪರಿಸರ ಸ್ನೇಹಿಯಾಗಿ ಬದುಕುವುದನ್ನು ನಾವು ರೂಢಿಸಿಕೊಂಡಾಗ ಮಾತ್ರ ಪರಿಸರದ ಉಳಿವು ಮತ್ತು ನಮ್ಮ ಉಳಿವು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ., ಮಾತನಾಡುತ್ತಾ, ಅವರು ಮುಂದಿನ ಭವಿಷ್ಯವಾಗಿರುವ ಯುವಜನತೆ ಸಕ್ರಿಯರಾದ್ದಲ್ಲಿ ಪರಿಸರ ರಕ್ಷಣೆ ಯಶಸ್ವಿಯಾಗಬಲ್ಲದು ಎಂದರು. ಅರಣ್ಯ ಇಲಾಖೆ ಉಡುಪಿಯ ವಲಯಾಧಿಕಾರಿ ಸುಬ್ರಹ್ಮಣ್ಯ ಆಚಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ, ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಕೆ.ಇ., ಯೂತ್ ರೆಡ್‌ಕ್ರಾಸ್ ಸಂಚಾಲಕರಾದ ಪ್ರಶಾಂತ ಎನ್ ಹಾಗೂ ಬೋಧಕ, ಬೋಧಕೇತರರು ಪಾಲ್ಗೊಂಡರು. ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕ ವಿಘ್ನೇ಼ಶ್ ಸ್ವಾಗತಿಸಿ, ಶ್ರದ್ಧಾ ವಂದಿಸಿದರು. ಪಲ್ಲವಿ ನಿರೂಪಿಸಿದರು.