Saturday, January 18, 2025
Saturday, January 18, 2025

ಉಡುಪಿ: ಸಾರ್ಟಿಂಗ್ ಆಫೀಸ್ ಕೌಂಟರಿನಲ್ಲಿ ಅಂಚೆ ಬುಕ್ಕಿಂಗ್ ಸೇವೆ ಲಭ್ಯ

ಉಡುಪಿ: ಸಾರ್ಟಿಂಗ್ ಆಫೀಸ್ ಕೌಂಟರಿನಲ್ಲಿ ಅಂಚೆ ಬುಕ್ಕಿಂಗ್ ಸೇವೆ ಲಭ್ಯ

Date:

ಉಡುಪಿ, ಜೂನ್ 28: ಭಾರತೀಯ ಅಂಚೆ ಇಲಾಖೆಯ ಅರ್.ಎಂ.ಎಸ್ ಕ್ಯೂ ವಿಭಾಗದ ಅಧೀನದಲ್ಲಿರುವ ಉಡುಪಿ ಸಾರ್ಟಿಂಗ್ ಕಚೇರಿಯು ಉಡುಪಿ ಹೆಡ್ ಪೋಸ್ಟ್ ಆಫೀಸಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕೌಂಟರಿನಲ್ಲಿ ಪ್ರಸಕ್ತ ತ್ವರಿತ ಅಂಚೆ ಸೇವೆಯು ಸಂಜೆ 7 ರಿಂದ ರಾತ್ರಿ 8.30 ರ ವರೆಗೆ ಹಾಗೂ ನೋಂದಾಯಿತ ಅಂಚೆ ಸೇವೆಯು ಸಂಜೆ 5.30 ರಿಂದ 6.30 ರ ವರೆಗೆ ಮಾತ್ರ ಲಭ್ಯವಿತ್ತು.

ಅಂಚೆ ಗ್ರಾಹಕರ ಅನುಕೂಲಕ್ಕಾಗಿ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ತ್ವರಿತ ಅಂಚೆ ಸೇವೆಯ ಜೊತೆಗೆ ನೋಂದಾಯಿತ ಅಂಚೆ ಸೇವೆ ಹಾಗೂ ತ್ವರಿತ ಪಾರ್ಸೆಲ್ ಸೇವೆಯನ್ನು ಆರಂಭಿಸಲಾಗಿದ್ದು, ಅಂಚೆ ಚೀಟಿಗಳು ಕೂಡ ಲಭ್ಯವಿರುತ್ತದೆ. ಈ ಎಲ್ಲಾ ಸೇವೆಗಳ ಶುಲ್ಕವನ್ನು ಗ್ರಾಹಕರು ಡಿಜಿಟಲ್ ಪಾವತಿ ಅಥವಾ ಕ್ಯೂಆರ್ ಕೋಡ್ ಮೂಲಕವೂ ಪಾವತಿಸಬಹುದು. ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಹಕರು ಈ ಸೇವೆಯ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ಮಂಗಳೂರು ಆರ್.ಎಂ.ಎಸ್ ಕ್ಯೂ ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...

ಗಾನ ಸಂಭ್ರಮ 2025 ಸಂಪನ್ನ

ಕುಂದಾಪುರ, ಜ.18: ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿಯ ಸುವರ್ಣ...
error: Content is protected !!