Saturday, January 18, 2025
Saturday, January 18, 2025

ಜೂ. 26-28 ರವರೆಗೆ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

ಜೂ. 26-28 ರವರೆಗೆ ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

Date:

ಉಡುಪಿ, ಜೂನ್ 23: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜೂನ್ 26 ರಿಂದ 28 ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
ಉದ್ಯಾವರ ಎಂ.ಯು.ಎಸ್.ಎಸ್ ನಿಂದ ಹೊರಡುವ ಪಿತ್ರೋಡಿ ಮತ್ತು ಪಿತ್ರೋಡಿ ಇಂಡಸ್ಟ್ರೀಯಲ್ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂಕುದ್ರು, ಗೋವಿಂದಗುಡ್ಡೆ, ಪಿತ್ರೋಡಿ, ಮುದ್ದಲಗುಡ್ಡೆ, ಪಿತ್ರೋಡಿ ಇಂಡಸ್ಟ್ರೀಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂ. 26 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಉಡುಪಿ-3 ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರುತಿ ವಿಥೀಕಾ, ತೆಂಕಪೇಟೆ, ಕೆ.ಎಂ.ಮಾರ್ಗ, ಕನಕದಾಸ ರಸ್ತೆ, ನ್ಯೂ ಸಿಟಿ ಆಸ್ಪತ್ರೆ, ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಇಂದ್ರಾಳಿ ಫೀಡರಿನಲ್ಲಿ ಹಾಗೂ 33/11ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಚಿಟ್ಪಾಡಿ ಮತ್ತು ಉದ್ಯಾವರ-1 ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಇಂದಿರಾನಗರ, ಕಸ್ತೂರ್ಬಾ ನಗರ, ಕುಕ್ಕಿಕಟ್ಟೆ, ಪದ್ಮನಾಭನಗರ, ಚಿಟ್ಪಾಡಿ, ಹನುಮಾನ್ ಗ್ಯಾರೇಜ್, ಅಮ್ಮಣ್ಣಿ ರಾಮಣ್ಣ ಹಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/11ಕೆ.ವಿ ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್ಪ್ರೆಸ್ ಫೀಡರಿನಲ್ಲಿ, 220/110/11 ಕೆ.ವಿ ಹೆಗ್ಗುಂಜೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಹೆಗ್ಗುಂಜೆ ಫೀಡರ್ ಮಾರ್ಗದಲ್ಲಿ ಮತ್ತು 110/11 ಕೆ.ವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಶಾಂತಿವನ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಗೋಪಾಲಪುರ, ಶಾಂತಿವನ, ಬಡಾನಿಡಿಯೂರು, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆ.ವಿ ಬಸ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಶಂಕರನಾರಾಯಣ, ಆವರ್ಸೆ, ಬಿದ್ಕಲ್‌ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ, ವಾರಾಹಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಅಮಾಸೆಬೈಲು, ಕುಳುಂಜೆ, ಶಂಕರನಾರಾಯಣ, ಹಾಲಾಡಿ-26, ಮಚ್ಚಟ್ಟು, ರಟ್ಟಾಡಿ, ತೊಂಬಟ್ಟು, ಕೆಳಸುಂಕ, ಜಡ್ಡಿನಗದ್ದೆ, ಹಾಲಾಡಿ, ಬಿದ್ಕಲ್‌ಕಟ್ಟೆ, ಗಾವಳಿ, ಹಾಲಾಡಿ-28, ಮಡಾಮಕ್ಕಿ, ಹಾಲಾಡಿ-76, ಸಿದ್ದಾಪುರ, ಉಳ್ಳೂರು-74, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ-ಹರ್ಕಾಡಿ, ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಬೈಲೂರು, ಕೊಂಡಳ್ಳಿ, ಬೆದ್ರಾಡಿ, ಕೋಣಿಹರ, ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ ಮತ್ತು ಗೋಳಿಯಂಗಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 27 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಕೆ.ಎಂ.ಎಫ್ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈಶ್ವರನಗರ, ಸರಳೆಬೆಟ್ಟು, ಅರ್ಬಿ, ಪ್ರಗತಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 28 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಉದ್ಯಾವರ ಎಂ.ಯು.ಎಸ್.ಎಸ್ ನಿಂದ ಹೊರಡುವ ಸಂಪಿಗೆನಗರ ಮತ್ತು ಕಡೆಕಾರ್ ಫೀಡರ್ ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಾಲ್ಮರ, ಕಲಾಯಿಬೈಲು, ಸಂಪಿಗೆನಗರ, ಕುತ್ಪಾಡಿ, ಅನಂತಕೃಷ್ಣ ನಗರ, ಕಡೆಕಾರ್, ಕಿದಿಯೂರು, ಪಡುಕೆರೆ, ಕನ್ನರ್ಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 28 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 33/11 ಕೆ.ವಿ ಹೆಬ್ರಿ ಉಪಕೇಂದ್ರದಿAದ ಸರಬರಾಜಾಗುವ ಬೇಳೆಂಜೆ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ, ಚಾರ, ಶಿವಪುರ, ಕನ್ಯಾನ, ನಾಡ್ಪಾಲು, ಸೋಮೇಶ್ವರ, ಸೀತಾನದಿ, ಮಡಾಮಕ್ಕಿ, ಕಾಸನಮಕ್ಕಿ, ಮುದ್ರಾಡಿ, ವರಂಗ, ಮುನಿಯಾಲು, ಕಬ್ಬಿನಾಲೆ, ಕೆರೆಬೆಟ್ಟು, ಹೊಸುರು, ಬಚ್ಚಾಪ್ಪು, ಹೆಬ್ರಿ, ಕಲ್ಲಿಲ್ಲು ವಾಟರ್ ಸಪ್ಲೈ, ಹುಟ್ಟುರ್ಕೆ ವಾಟರ್ ಸಪ್ಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 28 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!